ನವದೆಹಲಿ: ಬ್ರೈನ್ ಹ್ಯಾಮರೇಜ್ ಗೆ ತುತ್ತಾಗಿದ್ದ ಮಾಜಿ ಕೇಂದ್ರ ಸಚಿವ ಬೂಟಾಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಬೂಟಾಸಿಂಗ್ ಅವರ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದರೊಂದಿಗೆ ರಾಜಸ್ಥಾನದಿಂದ ಸಂಸತ್ತಿಗೆ ಆಯ್ಕೆಯಾಗಿದ್ದು ಇಂದಿರಾ ಗಾಂಧಿ ಸರ್ಕಾರದ ಸಮಯದಲ್ಲಿ ತಮ್ಮ ಸೇವೆ ಹಾಗೂ ನಿಷ್ಠೆಯನ್ನು ತೋರಿಸಿದರು. ಅಷ್ಟೇ ಅಲ್ಲದೆ ಪಶ್ಚಿಮಬಂಗಾಳ ಹಾಗೂ ಬಿಹಾರದ ರಾಜ್ಯಪಾಲರಾಗಿ ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿದರು.
86 ವರ್ಷದ ಬೂಟಾಸಿಂಗ್ ಅವರನ್ನು ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ ಅವರನ್ನು ಬದುಕಿಸಲು ಆಗಲಿಲ್ಲ ಎಂದು ಹೇಳಲಾಗುತ್ತಿದೆ.