ತಿರುವನಂತಪುರಂ: ತಿರುವನಂತಪುರಂ ಶಬರಿಮಲೆ ದೇವಸ್ಥಾನದಲ್ಲಿ 37 ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಭಕ್ತರಲ್ಲಿ ಆತಂಕ ತಂದಿದೆ.
ಶಬರಿಮಲೆ ದೇಗುಲದ ಆರು ಮಂದಿ ಅರ್ಚಕರು ಸೇರಿದಂತೆ 37 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಕೊರೋನಾ ಭೀತಿಯಲ್ಲಿ ಶಬರಿಮಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ದಿನನಿತ್ಯ ಸನ್ನಿಧಾನಕ್ಕೆ ಐದು ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ.
ಅಲ್ಲಿಯ ಸಿಬ್ಬಂದಿಗಳಲ್ಲಿ ಕೊರೋನ ಕಂಡ ತಕ್ಷಣ ತಕ್ಷಣ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಸೋಂಕು ತಗಲಿದ ಅವರನ್ನು ಚಿಕಿತ್ಸೆಗಾಗಿ ಕಳಿಸಲಾಗಿದ್ದು, ಇತರರಿಗೆ ಪರೀಕ್ಷೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ ಅಲ್ಲಿನ ನಿಯಮಗಳನ್ನು ಹೆಚ್ಚುವರಿ ಮಾಡಿದ್ದು, ಶಬರಿಮಲೆಗೆ ಹೋಗುವ ಭಕ್ತಾದಿಗಳಿಗೆ ಕನಿಷ್ಠ 48ಗಂಟೆಯೊಳಗೆ ಕೊರೋನಾ ಪರೀಕ್ಷೆ ಮಾಡಿಸಿದ ಸರ್ಟಿಫಿಕೇಟ್ ಕಡ್ಡಾಯವಾಗಿ ತೋರಿಸಬೇಕಾಗಿದೆ