ನೈರೋಬಿ: ಇಸ್ಲಾಮಿಕ್ ಸಂಘಟನೆಗಳಿಗೆ ಸೇರಿದ ಉಗ್ರರ ದಾಳಿಯಿಂದ 79 ಜನ ನಾಗರಿಕರು ಮೃತಪಟ್ಟಿರುವ ಘಟನೆ ಆಫ್ರಿಕಾದ ನೈಜರ್ ನಲ್ಲಿ ನಡೆದಿದೆ.
ಮಾಲಿ ದೇಶದ ಗಡಿಗೆ ಹೊಂದಿಕೊಂಡಿರುವ ಟೋಕೊಬಾಂಗೋ ಗ್ರಾಮವೊಂದರಲ್ಲಿ ಉಗ್ರರು ಈ ಮಾರಣಾಂತಿಕ ದಾಳಿಯನ್ನು ನಡೆಸಿದ್ದು, ಸ್ಥಳದಲ್ಲಿಯೇ 49 ಮಂದಿ ಸಾವನ್ನಪ್ಪಿದ್ದರು ಹಾಗೂ 17 ಜನರಿಗೆ ಗಂಭೀರ ಗಾಯಗಳಾಗಿದ್ದವು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಝರೋಮಾಡ್ರೇಯಿ ಗ್ರಾಮದಲ್ಲಿಯೂ ಉಗ್ರರು ದಾಳಿ ನಡೆಸಿತು ಸ್ಥಳದಲ್ಲಿಯೇ 30 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಯ ವೇಳೆ ಇಬ್ಬರು ಫ್ರಾನ್ಸ್ ಸೈನಿಕರು ಮೃತಪಟ್ಟಿದ್ದಾರೆಟ್ಟಿದ್ದಾರೆ.