ಅಂದ್ರ ಪ್ರದೇಶ: 400 ವರ್ಷ ಹಳೆಯದಾದ ರಾಮತೀರ್ಥ ದೇಗುಲದಲ್ಲಿನ ರಾಮನ ವಿಗ್ರಹ, ಕೋಮಲಮ್ಮನ ಪಾದ ಹಾಗೂ ರಾಜಮಂಡ್ರಿಯ ವಿಘ್ನೇಶ್ವರ ದೇವಾಲಯದ ಸುಬ್ರಹ್ಮಣ್ಯ ವಿಗ್ರಹಗಳನ್ನು ದುಷ್ಕರ್ಮಿಗಳು 3 ದಿನದ ಅಂತರದಲ್ಲಿ ಧ್ವಂಸಗೊಳಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ಮಂಗಳವಾರ ವಿಶಾಖಪಟ್ಟಣದ ರಾಮತೀರ್ಥ ಸೀತಾ ಲಕ್ಷ್ಮಣ ಕೋದಂಡರಾಮ ದೇವಾಲಯಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ರಾಮನ ವಿಗ್ರಹ ಧ್ವಂಸಗೊಳಿಸಿದರು. ನಂತರ ಆ ರಾಮನ ವಿಗ್ರಹದ ತುಂಡಾದ ತಲೆ ಸಮೀಪದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಅದೇ ಗುರುವಾರ ಮತ್ತೆ ರಾಜಮಂಡ್ರಿಯ ವಿಘ್ನೇಶ್ವರ ದೇಗುಲದ ಮೇಲೆಯೂ ದಾಳಿ ನಡೆಸಿ ಸುಬ್ರಹ್ಮಣ್ಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ವಿಶಾಖಪಟ್ಟಣ ಏಜೆನ್ಸಿ ಪ್ರದೇಶದ ಕೋಮಲಮ್ಮನ ಪಾದಗಳನ್ನು ಭಗ್ನಗೊಳಿಸಿರುವುದು ಕಂಡುಬಂದಿದ್ದು ಎಲ್ಲರೂ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಕೂಡ ದಾಸರಿ ಪಟ್ಟಣದ ಕೃಷ್ಣ ದೇವಾಲಯದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ದೇಗುಲದ ಗೋಡೆ ಮೇಲೆ ಮಾಂಸ ಹಾಗೂ ರಕ್ತದ ಕಲೆಗಳನ್ನು ಮಾಡಿದ್ದರು. ಸೆಪ್ಟೆಂಬರ್ನಲ್ಲಿ ಚಿತ್ತೂರು ಜಿಲ್ಲೆಯ ನಂದಿ ವಿಗ್ರಹ ಧ್ವಂಸಗೊಳಿಸಲಾಗಿತ್ತು.
ಒಟ್ಟಿನಲ್ಲಿ ಕಳೆದ ಕೆಲ ತಿಂಗಳುಗಳಿಂದ ದೇವಸ್ಥಾನಗಳ ಮೇಲೆ ಹಲವಾರು ಆಕ್ರಮಣಗಳು ಹಾಗೂ ದಾಳಿಗಳು ನಡೆದಿದ್ದು ದೇಗುಲ ಹಾಗೂ ದೇವರ ವಿಗ್ರಹಗಳನ್ನು ಬಂಗ ಗೊಳಿಸಿರುವ ಕೃತಿಯ ಕಂಡುಬಂದಿದೆ. ಇದೇ ಹಿನ್ನೆಲೆಯಲ್ಲಿ ಶನಿವಾರ ರಾಮನ ವಿಗ್ರಹ ಧ್ವಂಸಗೊಂಡ ಘಟನಾ ಸ್ಥಳಕ್ಕೆ ಟಿಡಿಪಿ ನೇತಾರ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಿ ರಾಜ್ಯ ಸರ್ಕಾರವು ದೇಗುಲಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಘಟನಾವಳಿಗಳಿಂದ ಕುರಿತು ವಿರೋಧ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಇಂತಹ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.