ನವದೆಹಲಿ: ಕೊರೋನ ಸೋಂಕು ತಡೆ ಲಸಿಕೆಯನ್ನು ಸಂಶೋಧಿಸಿದ ಹಿನ್ನೆಲೆಯಲ್ಲಿ ದೇಶದ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ‘ವಿಜ್ಞಾನಿಗಳ ಈ ಕೆಲಸವು ಪ್ರತಿಯೊಬ್ಬ ಭಾರತೀಯರಿಗೂ ತಂದಿದೆ ಎಂದು ಹೇಳುವ ಮೂಲಕ’ ಅಭಿನಂದನೆ ತಿಳಿಸಿದರು.
ಎರಡು ರೀತಿಯ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದ್ದು, ಇದು ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ವಿಚಾರ. ಅದರೊಂದಿಗೆ ನಿರ್ಭಯ ಭಾರತದ ಕನಸು ಸಹಕಾರ ಗೊಳಿಸುತ್ತಿರುವ ವಿಜ್ಞಾನಿಗಳ ಪರಿಶ್ರಮ ಹಾಗೂ ಕಾಳಜಿ ಇಲ್ಲಿ ಕಾಣಿಸುತ್ತಿದೆ ಎಂದು ಪ್ರಧಾನಿ ತಮ್ಮ ಮಾತುಗಳನ್ನು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡರು.