ಚೆನ್ನೈ: 19 ವರ್ಷದ ಯುವತಿಯೊಬ್ಬಳು ಅತ್ಯಾಚಾರ ಎಸಗಲು ಬಂದವನನ್ನು ಹತ್ಯೆಗೈದ ಘಟನೆ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ ನಡೆದಿದೆ.
ಒಬ್ಬಂಟಿಯಾಗಿ ಎದೆಯ ಬಳಿ ನಡೆದು ಹೋಗುತ್ತಿದ್ದ ಯುವತಿಯನ್ನು ಯುವಕನೊಬ್ಬ ಹಿಂಬಾಲಿಸಿ ಅತ್ಯಾಚಾರ ನಡೆಸಲು ಯತ್ನಿಸಿದ. ಆತನ ಕೈಯಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಚಾಕು ತೋರಿಸಿ ಅತ್ಯಾಚಾರಕ್ಕೆ ಮುಂದಾದ ಯುವಕನನ್ನು ಅದೇ ಚಾಕುವಿನಿಂದ ಹೆದರಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಕುಡಿದ ಅಮಲಿನಲ್ಲಿದ್ದ ಕಾರಣ ತಳ್ಳಿದಾಗ ಬಿದ್ದ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮಗಳಿಗಾಗಿ ಕಾನೂನು ತಜ್ಞರ ಸಲಹೆಯನ್ನು ಕೋರಿದ್ದಾರೆ.