ತಿರುವನಂತಪುರಂ: 16 ವರ್ಷದ ಬಾಲಕ ನಿರಂತರ ಅತ್ಯಾಚಾರ ವೆಸಗಿದ್ದರಿಂದ 14 ವರ್ಷದ ಬಾಲಕಿ ಗರ್ಭವತಿಯಾಗಿರುವ ಘಟನೆ ಇಡುಕ್ಕಿ ಜಿಲ್ಲೆಯ ಕಂಬಮ್ ಮೆಡು ಪ್ರದೇಶದಲ್ಲಿ ನಡೆದಿದೆ.
ಆನ್ಲೈನ್ ತರಗತಿಗಳ ನೆಪದಲ್ಲಿ ಬಾಲಕ ಹದಿಹರೆಯದ ಬಾಲಕಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಹಲವು ತಿಂಗಳುಗಳಿಂದ ಬಾಲಕಿಯೊಂದಿಗೆ ಲೈಂಗಿಕ ದೌರ್ಜನ್ಯದ ಕೃತ್ಯ ಎಸಗುತ್ತಿದ್ದ. ಬಾಲಕಿ ಒಬ್ಬಂಟಿಯಾಗಿರುವಾಗ ಮತ್ತು ಆಕೆಯ ಪೋಷಕರು ಅಲ್ಲಿನ ತೋಟಗಳಲ್ಲಿ ಕೆಲಸಕ್ಕೆ ಹೋದಾಗ ಈ ದೌರ್ಜನ್ಯವನ್ನು ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಲೈಂಗಿಕ ದೌರ್ಜನ್ಯದ ಘಟನೆ ಬೆಳಕಿಗೆ ಬಂದಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಲೈಂಗಿಕ ದೌರ್ಜನ್ಯ ಪ್ರಕರಣ ಇಡುಕ್ಕಿ ಜಿಲ್ಲೆಯ ಕಂಬಮ್ ಮೆಡು ಪ್ರದೇಶದ ಪೊಲೀಸ್ ಠಾಣಾಯಲ್ಲಿ ದಾಖಲಾಗಿದ್ದು, ಆಕೆಯ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ ವೆಸಗಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದರು.