ಲಕ್ನೋ: ಈ ಹಿಂದೆ ಒಂದು ಸಂಚಲನವನ್ನೇ ಮೂಡಿಸಿದೆ ನಿರ್ಭಯ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಸಾಮೂಹಿಕ ಅತ್ಯಾಚಾರದ ಪ್ರಕರಣ ಉತ್ತರಪ್ರದೇಶದ ಬಾದಾಮ್ ನಲ್ಲಿ ಘಟಿಸಿದೆ.
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆಯ ಮೇಲೆ ಚಿತ್ರವಿಚಿತ್ರವಾದ ಹಿಂಸಾತ್ಮಕ ಕೃತ್ಯಗಳನ್ನು ಎಸಗಿದ ವಿಚಾರ ಮರಣೋತ್ತರ ಪರೀಕ್ಷೆ ಬಳಿಕ ಹೊರಬಿದ್ದಿದೆ.
ಘಟನೆ ನಡೆದ 18 ಗಂಟೆಗಳ ನಂತರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅತ್ಯಾಚಾರ ಎಸಗಿದ ಬಳಿಕ ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತೋರಿಸುವ ಮೂಲಕ ವಿಕೃತ ಮೆರೆದಿರುವ ಆರೋಪಿಗಳು, ಮಹಿಳೆಯ ಕಾಲು ಹಾಗೂ ಪಕ್ಕೆಲುಬುಗಳನ್ನು ಮುರಿದು ಆಕೆಯನ್ನು ಜನನಿಬಿಡ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದ್ದು, ಅತಿಯಾದ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾಳೆ.
ಮಹಿಳೆ ದೇವಸ್ಥಾನಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು ಆಕೆಯ ಕುಟುಂಬಸ್ಥರು ಮೂವರ ಮೇಲೆ ಶಂಕೆಯನ್ನು ವ್ಯಕ್ತಪಡಿಸುತ್ತಾರೆ. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.