ಆಗ್ರಾ: ಭಾರತದ ವಿವಿಧೆಡೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಲವಾರು ವಿಕೃತ ಮನಸುಗಳ ಕೃತ್ಯಗಳನ್ನು ಬಯಲು ಮಾಡುತ್ತಿದೆ. 16ರ ಬಾಲಕಿಯ ಮೇಲೆ 28 ವರ್ಷದ ಯುವಕ ಅತ್ಯಾಚಾರ ಎಸಗಿದ್ದು, ಪಾಪಿಗಳು ಅತ್ಯಾಚಾರದ ದೃಶ್ಯ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿರುವ ಘಟನೆ ಆಗ್ರಾದ ಫಿರೋಜಾಬಾದ್ನಲ್ಲಿ ನಡೆದಿದೆ.
ಫಿರೋಜಾಬಾದ್ ಜಿಲ್ಲೆಯ ನರ್ಕಿ ಪ್ರದೇಶದಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳು ಅಶ್ಲೀಲ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಡಿಸೆಂಬರ್ 1ರಂದು ಸಂಭವಿಸಿದ್ದು ಬಾಲಕಿ ಮನೆಯಿಂದ ಹೊರಹೋದ ಸಂದರ್ಭದಲ್ಲಿ ಆಕೆಯ ಮೇಲೆ ಆರೋಪಿಗಳಾದ ಭೂರಿ ಸಿಂಗ್ ಹಾಗೂಅನಿಲ್ ಕುಮಾರ್ ಅತ್ಯಾಚಾರ ಎಸಗಿದ್ದು ಸಂದರ್ಭದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ನಂತರ ಬಾಲಕಿಗೆ ಹೆದರಿಸಿ ಯಾರೊಂದಿಗೆ ಹೇಳಿದಂತೆ ಬಾಯಿಮುಚ್ಚಿಸಿ, ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.