ಮುಂಬೈ: 26/11ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾದ ಜಾಕಿಯೂರ್ ರೆಹಮಾನ್ ಲಖ್ವಿ ಅವರಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿಗಳು ತಿಳಿಸಿವೆ.
ಆರು ದಿನಗಳ ಹಿಂದೆ ಭಯೋತ್ಪಾದಕನನ್ನು, ಹಣಕಾಸು ಆರೋಪದ ಮೇಲೆ ಲಖ್ವಿಯನ್ನು ಬಂಧಿಸಲಾಗಿತ್ತು. 2015 ರಿಂದ ಜಾಮೀನಿನ ಮೇಲೆ ಹೊರಗಿದ್ದ ಎಲ್ಇಟಿ ಕಮಾಂಡರ್ನನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.