ಉತ್ತರ ಪ್ರದೇಶ: ವಿಷಪೂರಿತವಾಗಿದ್ದ ಮದ್ಯವನ್ನು ಸೇವಿಸಿ, ಐದು ಮಂದಿ ಮೃತಪಟ್ಟು, ಹಲವಾರು ಮಂದಿ ಅಸ್ವಸ್ಥರಾಗಿರುವ ಕುರಿತು ಉತ್ತರಪ್ರದೇಶದ ಬುಲಂದ್ಶೆಹರ್ನಲ್ಲಿ ವರದಿಯಾಗಿದೆ.
ಅಕ್ರಮ ಮದ್ಯ ಸೇವಿಸಿ ಮಾಡಿರುವುದು ಇದಕ್ಕೆ ಕಾರಣವಾಗಿದ್ದು, ಅವರು ಕುಡಿದಿರುವ ಮಧ್ಯ ವಿಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಐದು ಮಂದಿ ಮೃತಪಟ್ಟಿದ್ದು, ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 16 ಮಂದಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ ಹಾಗೂ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊರಗಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಈ ಮದ್ಯ ಮಾರಾಟವನ್ನು ಮಾಡಿದ್ದು, ಕಡಿಮೆ ಬೆಲೆಗೆ ಸಿಕ್ಕ ಕಾರಣ ಜನರು ಇದನ್ನು ಖರೀದಿಸಿ ಸೇವಿಸಿದ್ದಾರೆ. ಹಾಗೂ ಇದರಿಂದಾಗಿ ಎಲ್ಲಾ ಸಾವು-ನೋವುಗಳು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.