ನವದೆಹಲಿ: ರೈತರ ಹಾಗೂ ಸರ್ಕಾರದ ನಡುವಿನ ಎಂಟನೇ ಸುತ್ತಿನ ಮಾತುಕತೆ ಮುಗಿದಿದ್ದು, ಈ ಸುತ್ತಿನ ಮಾತುಕತೆಯೂ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ.
ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ರೈತ ಸಂಘಗಳು ಆಗ್ರಹಿಸಿದ್ದು, ಆ ಬೇಡಿಕೆಗೆ ಸರ್ಕಾರ ಒಪ್ಪದ ಕಾರಣ ಈ ಮಾತುಕತೆ ವಿಫಲವಾಗಿದೆ. ಜನವರಿ 15ರಂದು ಮುಂದಿನ ಸುತ್ತಿನ ಚರ್ಚೆ ನಡೆಸಲು ಉಪ್ಪಿಯ ಪಕ್ಷಗಳು ತೀರ್ಮಾನಿಸಿವೆ.
ಇಂದಿನ ಮಾತುಕತೆ ವೇಳೆ ರೈತ ನಾಯಕರು, “ಗೆಲ್ಲುತ್ತೇವೆ ಇಲ್ಲ ಸಾಯುತ್ತೇವೆ” ಎಂಬ ಭಿತ್ತಿಪತ್ರಗಳನ್ನು ತೋರಿಸುವ ಮೂಲಕ ಕೃಷಿ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ. ಇಂದು 44 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಅವರ ಆಗ್ರಹಗಳು ಸಂಪೂರ್ಣ ಗೊಳ್ಳುವ ವರೆಗೂ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ.