ಪಂಜಾಬ್ : ಕಳ್ಳರಿಬ್ಬರು ಕಾರನ್ನು ಕದಿಯುವ ಸಮಯದಲ್ಲಿ ಕರು ಮಾಲೀಕನ ಪತ್ನಿ ಸಮೇತ ಕದ್ದಿರುವ ಘಟನೆ ಪಂಜಾಬ್ನ ದೇರಾ ಬಸಿಯಲ್ಲಿ ನಡೆದಿದೆ. ದಂಪತಿ ತಮ್ಮ ಮಕ್ಕಳ ಶಾಲಾ ಶುಲ್ಕವನ್ನ ಭರಿಸಲು ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ರಾಜೀವ್ ಚಂದ್ ಎಂಬವರು ತಮ್ಮ ಪತ್ನಿಯೊಂದಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ಬಂದಿದ್ದು, ಪತಿಯನ್ನು ಕಾರಿನಲ್ಲಿಯೇ ಕೂರಿಸಿ ಹೋಗಿದ್ದಾರೆ. ಹಾಗೂ ಪತ್ನಿ ಕಾರಿನಲ್ಲಿ ಇದ್ದ ಕಾರಣ ಕಾರನ್ನು ಅಲ್ಲೇ ಬಿಟ್ಟಿದ್ದಾರೆ. ರಾಜೀವ್ ಹೋದ ಕೆಲವೇ ಕ್ಷಣಗಳಲ್ಲಿ ಕಳ್ಳರನ್ನು ಅಪಹರಿಸಿದ್ದು ಅದರಲ್ಲಿ ಒಬ್ಬ ಅವರ ಪತ್ನಿಯ ಬಾಯಿಯನ್ನು ಮುಚ್ಚಿದ್ದನು ಎನ್ನಲಾಗಿದೆ.
5 ಕಿಲೋಮೀಟರ್ ಹೋದನಂತರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಒಂದರ ಬಳಿ, ಕಾಡುಗಳ್ಳರು ರಾಜು ಅವರ ಪತ್ನಿ ಕಾರಿನಿಂದ ಹೊರದಬ್ಬಿದ್ದು, ಕಾರು ಸಮೇತ ಅವರು ಪರಾರಿಯಾಗಿದ್ದಾರೆ. ಈ ಕುರಿತಾದ ದೂರು ದಾಖಲಾಗಿದ್ದು ಕಳ್ಳರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.