ಕೊಚ್ಚಿ: ಭೀಕರ ಅಪಘಾತದಲ್ಲಿ ಕಾರು ರಭಸವಾಗಿ ನಾಲ್ಕು ಪಲ್ಟಿಯಾದರು, ಅದರಲ್ಲಿದ್ದ ಚಾಲಕ ಹಾಗೂ ಆತನ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಕಾರಿನಿಂದ ಹೊರಬಂದಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಅಪಘಾತವಾದ ಕಾರು ಟಾಟಾ ಹ್ಯಾರಿಯರ್ SUV. ಟಾಟಾ ಕಾರುಗಳು 5 ಸ್ಟಾರ್ ಸೇಫ್ಟಿಂಗ್ ರೇಟಿಂಗ್ ಹೊಂದಿದೆ. ಇದು ಗರಿಷ್ಠ ಸುರಕ್ಷತೆಯ ಕಾರು. ಹೀಗಾಗಿ ಭೀಕರ ಅಪಘಾತದಲ್ಲೂ ಯಾವುದೇ ಅಪಾಯವಿಲ್ಲದೆ ಕುಟುಂಬ ಪಾರಾಗಿದೆ ಎಂದು ಕುಟುಂಬ ಸದಸ್ಯ ತಿಳಿಸಿದ್ದಾರೆ.
ಕೇರಳದ ಸಜೀವ್ ಪಾಲಕುನ್ನು ತನ್ನ ಟಾಟಾ ಹ್ಯಾರಿಯರ್ ಮೂಲಕ ಕುಟುಂಬದ ಜೊತೆ ಪ್ರಯಾಣ ಬೆಳೆಸಿದ್ದಾರೆ. ವೇಗವಾಗಿ ಸಾಗುತ್ತಿದ್ದ ಕಾರು ದಾರಿ ಮಧ್ಯ ಅಪಘಾತಕ್ಕೀಡಾಗಿದೆ. ವೇಗ ಹಾಗೂ ಅಪಘಾತದ ರಭಸಕ್ಕೆ ಕಾರು ನಾಲ್ಕು ಪಲ್ಟಿಯಾಗಿ ಎತ್ತರಕ್ಕೆ ಚಿಮ್ಮಿ ನೆಲಕ್ಕೆ ಅಪ್ಪಳಿಸಿದೆ.
ಮಗುಚಿ ಬಿದ್ದ ಕಾರು ನಜ್ಜುಗುಜ್ಜಾಗಿದೆ. ಆಧರೆ ಒಳಗಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.