ನವದೆಹಲಿ: ಕಳೆದ ಎರಡು ದಿನಗಳಿಂದ ಇಳಿಕೆಯತ್ತಾ ಮುಖ ಮಾಡಿರುವ ಬಂಗಾರದ ಬೆಲೆ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಚಿನ್ನವನ್ನು ಇಷ್ಟಪಡುವವರಿಗೆ ಇದು ಸಂತಸದ ವಿಷಯವಾಗಿದೆ.
ಹಲವಾರು ದಿನಗಳ ನಂತರ ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ. ಚಿನ್ನದ ಬೆಲೆಯಲ್ಲಿ ₹2,000ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಅಂದರೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 4.1% ಅಥವಾ ₹2,086 ರಷ್ಟು ಇಳಿಕೆಯಾಗಿ 48,818 ರೂಪಾಯಿಗೆ ತಲುಪಿದೆ.
ಇಷ್ಟಲ್ಲದೆ ಅಲ್ಲದೆ ಬೆಳ್ಳಿಯ ಬೆಲೆಯಲ್ಲೂ ಕುಸಿತ ಕಂಡಿದ್ದು, 8.7% ನಷ್ಟು ಅಂದರೆ, 6,112 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದರಿಂದಾಗಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ₹63,850 ಗಳಿಗೆ ಬಂದು ಮುಟ್ಟಿದೆ.