ನವದೆಹಲಿ: ಚೀನಾದ ಯೋಧನೊಬ್ಬನ ಭಾರತೀಯ ಸೈನಿಕರು ಬಂಧಿಸಿದ್ದು, ಆತ ಭಾರತದ ಭೂ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಎಂದು ಹೇಳಲಾಗಿದೆ.
ಲಡಾಕ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಚೀನಾ ಯೋಧ ಭಾರತೀಯರ ವರ್ಷದಲ್ಲಿ ರುವುದನ್ನು ಚೀನಾದ ನಾಯಕನಿಗೆ ತಿಳಿಸಲಾಗಿದೆ. ಈ ಬಗ್ಗೆ ಉಪಯೋಗ ದೇಶಗಳ ನಡುವೆ ಮಾತುಕತೆ ನಡೆದಿದ್ದು ಯೋಧನನ್ನು ಚೀನಾಕ್ಕೆ ಮತ್ತೆ ಹಸ್ತಾಂತರಿಸುವ ಸಾಧ್ಯತೆ ಇದೆ.
ಈ ಹಿಂದೆಯೂ ಅಂದರೆ ಎರಡು ತಿಂಗಳ ಹಿಂದೆ ದಾರಿತಪ್ಪಿ ಬಂದ ಚೀನಾ ಯೋಧನನ್ನು ಭಾರತ ಈಗಾಗಲೇ ಹಸ್ತಾಂತರಿಸಿದ್ದು, ಅದೇ ಘಟನೆ ಮತ್ತೆ ಮರುಕಳಿಸಲಿದೆ ಎಂದು ಹೇಳಲಾಗುತ್ತದೆ.
ಚೀನಾ ಯೋಧ ಭಾರತಕ್ಕೆ ಬಂದ ಕಾರಣವನ್ನು ಶೋಧಿಸುತ್ತಿರುವ ರಕ್ಷಣಾ ಸಿಬ್ಬಂದಿ, ಈ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗುತ್ತದೆ.