ಇಂಡೋನೇಷ್ಯಾ: ಶನಿವಾರ ಇಂಡೋನೇಷ್ಯಾದಲ್ಲಿ ಶ್ರೀವಿಜಯ ಏರ್ ಲೈನ್ ಕಂಪನಿಯ ವಿಮಾನವೊಂದು ಟೇಕ್ ಆಫ್ ಆದ 5 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಕೆಳಗೆ ಬಂದಿತ್ತು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಅದರ ಜಾಲ ಇನ್ನು ಪತ್ತೆಯಾಗಿರಲಿಲ್ಲ. ಘಟನೆ ನಡೆದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ನಾಪತ್ತೆಯಾದ ವಿಮಾನಕ್ಕಾಗಿ ಶೋಧಕಾರ್ಯ ಪ್ರಾರಂಭಿಸಿದ್ದಾರು.
ಇದೀಗ ಅದರ ಅವಶೇಷ ಪತ್ತೆಯಾಗಿದ್ದು, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಅವಶೇಷ ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬೆಟ್ಟ ತುಂಡುಗಳು ಹಾಗೂ ಲೋಹದ ತುಣುಕುಗಳು ತೊರೆದಿದೆ ಎಂದು ತಿಳಿಸಿದ್ದಾರೆ.
ಘಟನಾವಳಿ ಬಗ್ಗೆ ಸ್ಪಷ್ಟನೆ ನೀಡಿರುವ ಇಂಡೋನೇಷಿಯಾ ರಕ್ಷಣಾ ಸಂಸ್ಥೆ, ‘ ಲಂಕಾಂಗ್ ದ್ವೀಪ ಮತ್ತು ಲಕಿ ದ್ವೀಪಗಳ ನಡುವೆ, ದೇಹದ ಭಾಗಗಳು, ಬೆಟ್ಟ ತುಂಡುಗಳು ಹಾಗೂ ಲೋಹದ ತುಣುಕುಗಳು ಪತ್ತೆಯಾಗಿವೆ. ಈ ಕುರಿತು ಇನ್ನೂ ಹೆಚ್ಚಿನ ಶೋಧಗಳು ನಡೆಯುತ್ತಿದೆ’ ಎಂದು ತಿಳಿಸಿದರು.
ವಿಮಾನದಲ್ಲಿದ್ದ 63 ಮಂದಿಯ ಪ್ರಾಣದ ಬಗ್ಗೆ ಆತಂಕಗೊಂಡಿರುವ ಅವರ ಕುಟುಂಬಸ್ಥರು ಈ ಸುದ್ದಿ ಆನಂತರ ಇನ್ನೂ ಹೆಚ್ಚಿನ ಚಿಂತೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಅದರಲ್ಲಿದ್ದ ಜನರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.