ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಶನಿವಾರ ರಾತ್ರಿ ವಿದ್ಯುತ್ ಪೂರೈಕೆಯಲ್ಲಿ ದಿಢೀರ್ ಸಮಸ್ಯೆ ಉಂಟಾಗಿದ್ದು , ದೇಶದ ಬಹುತೇಕ ಪ್ರದೇಶಗಳು ಆವರಿಸಿತ್ತು .
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ಲಾಮಾಬಾದ್ನ ಉಪ ಆಯುಕ್ತ ಹಮ್ಹಾ ಶಸ್ಮತ್ , ” ರಾಷ್ಟ್ರೀಯ ವಿದ್ಯುತ್ ಪ್ರಸರಣಾ ಕಂಪನಿಯ ( ಎನ್ಟಿಡಿಸಿ ) ವಿದ್ಯುತ್ ಮಾರ್ಗಗಳು ಟ್ರಿಪ್ ಆಗಿವೆ . ಆದ್ದರಿಂದ ಪೂರೈಕೆಯಲ್ಲಿ ಸಮಸ್ಯೆಯಾಗಿದೆ . ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ ಎಂದು ಹೇಳಿಕೊಂಡಿದ್ದಾರೆ .
ಪಾಕಿಸ್ತಾನದ ಮುಖ್ಯ ಪ್ರದೇಶಗಳಾದ ಕರಾಚಿ, ರಾವಲ್ಪಿಂಡಿ , ಲಾಹೋರ್ , ಇಸ್ಲಾಮಾಬಾದ್ ಮತ್ತು ಮುಲ್ತಾನ್ ಅಲ್ಲದೆ ಇನ್ನೂ ಕೆಲವು ನಗರಗಳಲ್ಲೂ ವಿದ್ಯುತ್ ಇಲ್ಲದೆ ಸಮಸ್ಯೆ ಅನುಭವಿಸಿದರು .