ನವದೆಹಲಿ: ದೇಶದಲ್ಲಿ ಇದೀಗ ಸುದ್ದಿ ಮಾಡುತ್ತಿರುವ ಹಾಗೂ ಎಲ್ಲರಲ್ಲೂ ಆತಂಕ ಹುಟ್ಟಿಸುತ್ತಿರುವ ಹಕ್ಕಿಜ್ವರ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ ಎಂಬುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ದೇಶದ ಹಲವು ಪ್ರದೇಶಗಳಲ್ಲಿ ಸತ್ತು ಬೀಳುತ್ತಿರುವ ಹಕ್ಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ದೇಶದ ಜನರಿಗೆ ಒಂದು ತಲೆನೋವಾಗಿ ಕಾಡುತ್ತಿದೆ. ಅಷ್ಟೇ ಅಲ್ಲದೆ ಇದೀಗ ಹಲವು ರಾಜ್ಯಗಳಲ್ಲಿ ಕೋಳಿ ಮಾಂಸ ಮಾರಾಟದ ಮೇಲೆ ಹಾಗೂ ಉತ್ಪನ್ನಗಳ ಮೇಲೆ ನಿಷೇಧ ಹೋಗಿದ್ದು, ಮುನ್ನೆಚ್ಚರಿಕೆ ಕ್ರಮಗಳ ಹಲವು ಕಾರ್ಯಗಳನ್ನು ಮಾಡಲಾಗುತ್ತದೆ.
ಇಷ್ಟೆಲ್ಲಾ ಆಗಿಯೂ ಹಕ್ಕಿಜ್ವರ ಮನುಷ್ಯರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಹಕ್ಕಿಗಳ ಜೊಲ್ಲು, ಸಿಂಬಳ ಹಾಗೂ ಹಿಕ್ಕೆಗಳನ್ನು ಮುಚ್ಚುವುದರ ಮೂಲಕ ಮನುಷ್ಯರಿಗೆ ಬರುವ ಸಾಧ್ಯತೆ ಇದೆ. ಹಕ್ಕಿಗಳ ಮೂಗು, ಕಣ್ಣು ಮತ್ತು ಬಾಯಿ ಸ್ಪರ್ಶಿಸುವ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ.
ಇನ್ನು ಕೋಳಿಮಾಂಸವನ್ನು ತಿನ್ನುವವರು ಎಚ್ಚರಿಕೆಯಿಂದ ಹಾಗೂ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಹಾಗೆಯೇ ಕೋಳಿಯ ಯಾವುದೇ ಉತ್ಪನ್ನಗಳನ್ನು ತಿನ್ನಬೇಕಾದರೆ ಮುಂಜಾಗ್ರತಾ ಕ್ರಮಗಳ ಆಗಿ ಅವುಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು ಎಂದು ಹೇಳಲಾಗುತ್ತಿದೆ.