ನವದೆಹಲಿ : ಜನವರಿ 16ರಿಂದ ಮಹತ್ವದ ಅಭಿಯಾನ ಆರಂಭವಾಗಲಿದ್ದು, ದೇಶದಲ್ಲಿ ತಯಾರಿಸಿದ ಲಸಿಕೆಯನ್ನು ಎಲ್ಲರಿಗೂ ನೀಡಲಾಗುವುದು. ಪ್ರಸ್ತುತ ಎರಡು ರೀತಿಯ ಲಸಿಕೆಗಳನ್ನು ತಯಾರಿಸಿದ್ದು ಇನ್ನೂ ನಾಲ್ಕು ರೀತಿಯ ಲಸಿಕೆಗಳು ಹೊರಬರಲಿವೆ. ದೇಶೀಯವಾಗಿಯೇ ಲಸಿಕೆ ಉತ್ಪಾದಿಸುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಲಸಿಕೆಯ ವಿಷಯದಲ್ಲಿ ವಿಜ್ಞಾನಿಗಳ ಪಾಲು ಬಹುತೇಕ ವಿದೆ ಆದ್ದರಿಂದ ವಿಜ್ಞಾನಿಗಳ ಸೂಚನೆಯನ್ನು ಪಾಲಿಸುತ್ತಿದ್ದೇವೆ. ಅಗತ್ಯವಿರುವವರಿಗೆ ಲಸಿಕೆ ಮೊದಲು ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ನಂತರ ಮಾತನಾಡಿದ ಅವರು, ಲಸಿಕೆ ವಿತರಣೆಗೆ ಮೂಲ ಸೌಕರ್ಯ ಸಿದ್ಧಗೊಂಡಿದೆ. ಡ್ರೈ ರನ್ ನಮ್ಮ ಕ್ಷಮತೆಯನ್ನು ತೋರಿಸುತ್ತದೆ. ಮೊದಲ ಹಂತದಲ್ಲಿ 3 ಕೋಟಿ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಇಂದಿನ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗಿದ್ದ ಮೀಟಿಂಗ್ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಈಗಾಗಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಅಭಿಯಾನ ದೇಶದಲ್ಲಿ ಆರಂಭಗೊಂಡಿದೆ. ಕೊರೋನಾ ಲಸಿಕೆಯ ಬಗೆಗಿನ ಡೇಟಾ ಕೋವಿನ್ ನಲ್ಲಿ ಲಭ್ಯವಾಗಲಿದೆ. ಮೊದಲ ಡೋಸ್ ಬಳಿಕ ಪ್ರಾಥಮಿಕ ಸರ್ಟಿಫಿಕೇಟ್ ನೀಡಲಾಗುತ್ತದೆ. ವ್ಯಾಕ್ಸಿನ್ ಕುರಿತಂತ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.