ನವದೆಹಲಿ: ಕೃಷಿ ಮಸೂದೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಪ್ರತಿಭಟನೆ ಮುಂದುವರಿಸುವುದು ಆದರೆ ನಡೆಸಿ ಎಂದು ರೈತರಿಗೆ ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.
ವಿವಾದಿತ 3 ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳನ್ನು ಪರಿಶೀಲಿಸಿದ ಸರ್ವೋಚ್ಛ ನ್ಯಾಯಾಲಯ, ಯಾವುದೇ ಶಕ್ತಿಗೂ ನ್ಯಾಯಾಲಯವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದಲೇ ಸಮಸ್ಯೆಯನ್ನು ಪರಿಹರಿಸಲು ಸಮಿತಿಯೊಂದನ್ನು ರಚಿಸುತ್ತೇವೆ. ಆ ಸಮಿತಿಯಲ್ಲಿ ಕಾಯ್ದೆಯ ಕುರಿತು ವಿಸ್ತರ ಅವಲೋಕನೆಗಳು ನಡೆಯುವುದು. ನಂತರ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ರೈತರು ಈ ಕುರಿತಾಗಿ ನ್ಯಾಯಾಲಯ ದೊಂದಿಗೆ ಸಹಕರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಈ ವಿಚಾರಣೆ ವೇಳೆ, ಕಾಯ್ದೆಯ ಕುರಿತು ಹಲವಾರು ಸಂಧಾನಗಳು ನಡೆದಿವೆ. ಹಲವಾರು ಅಧಿಕಾರಿಗಳು ಮಂತ್ರಿಗಳು ಚರ್ಚೆ ನಡೆಸಿದ್ದಾರೆ ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ಯಾವುದೇ ಮಾತುಗಳನ್ನು ಹೇಳಿಲ್ಲ ಅಥವಾ ಚರ್ಚೆಗೆ ಭಾಗಿಯಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆಂದು ರೈತರ ಪರ ವಕೀಲ ಎಮ್ಎಲ್ ಶರ್ಮಾ ಅವರು ಹೇಳಿದರು.
ಈ ವಿಷಯವಾಗಿ ಪ್ರತಿಕ್ರಿಯಿಸಿದ ಮಾತನಾಡಿರುವ ಮುಖ್ಯ ನ್ಯಾಯಮೂರ್ತಿಗಳು, ದೇಶದ ಪ್ರಧಾನಿಯನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.