ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬಕ್ಕೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಹಾರೈಸಿದರು.
ಈ ಹಬ್ಬವು ದೇಶದ ಜನತೆಗೆ ಶುಭವನ್ನು ತರಲಿ. ಈ ಹಬ್ಬವು ಪ್ರಕೃತಿಯೊಂದಿಗೆ ಸಾಮರಸ್ಯ, ಸಹಾನುಭೂತಿಯಿಂದ ಬದುಕಲು ಈ ಹಬ್ಬ ನಮಗೆ ಪ್ರೇರಣೆಯಾಗಲಿ ಎಂದು ಮೋದಿ ಅವರು ಆಶಿಸಿದರು.
ತಮಿಳುನಾಡು, ಅಸ್ಸಾಂ, ಸೇರಿದಂತೆ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಆಚರಿಸುವ ಹಬ್ಬವನ್ನು ಎಲ್ಲರೂ ಜತೆಯಾಗಿ ಸಂಭ್ರಮಿಸುವ ಎಂದು ಅವರು ಹೇಳಿದರು.