News Kannada
Friday, September 30 2022

ದೇಶ-ವಿದೇಶ

ದೇಶದಲ್ಲಿ 500 ಹೊಸ ಆರ್ ಎ‌ಎಫ್ ಘಟಕ ಆರಂಭಿಸಲು ತೀರ್ಮಾನ: ಗೃಹ ಸಚಿವ ಅಮಿತ್ ಶಾ - 1 min read

Photo Credit :

 ದೇಶದಲ್ಲಿ 500 ಹೊಸ ಆರ್ ಎ‌ಎಫ್ ಘಟಕ ಆರಂಭಿಸಲು ತೀರ್ಮಾನ: ಗೃಹ ಸಚಿವ ಅಮಿತ್ ಶಾ

ಮೋದಿ ಅವರ ಅಧಿಕಾರಕ್ಕೆ ಬಂದನಂತರ ಕಾನೂನು ಸುವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಯಿತು. ದೇಶದಲ್ಲಿ 500 ಹೊಸ ಆರ್ ಎ‌ಎಫ್ ಘಟಕ ಆರಂಭಿಸಲು ತೀರ್ಮಾನಿಸಲಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಅವರು ಭದ್ರಾವತಿಯ ಬುಳ್ಳಾಪುರದಲ್ಲಿ 50 ಎಕರೆಯ ರ್ಯಾಪಿಡ್ ಆಕ್ಷನ್ ಫೊರ್ಸ್ ನ ಭೂಮಿ ಪೂಜೆಯನ್ನ ನೆರವೇರಿಸಿ ಮಾತನಾಡಿದರು. ದೆಹಲಿಯಲ್ಲಿ ಸಿಆರ್ ಪಿಎಫ್ ನಲ್ಲಿ ರಾಷ್ಟ್ರೀಯ ಫೊರೆನ್ಸಿಕ್ ಯೂನಿವರ್ಸ್ ಸಿಟಿ ಹಾಗೂ ರಾಷ್ಡ್ರೀಯ ರಕ್ಷ ಯೂನಿವರ್ಸಿಟಿ ಆರಂಭಿಸಲಾಗಿದೆ.

ಸಿಎಂ ಯಡಿಯೂರಪ್ಪನವರು ಈ ರಾಷ್ಟ್ರೀಯ ಮಕ್ಕಳನ್ನ ಯೋಧರಂತೆ ತಯಾರಿಸುವ ಶಿಸ್ತುಬದ್ಧ ಜೀವನಕ್ಕೆ ಅನುಕೂಲವಾಗುವಂತಹ ಈ ರಕ್ಷಾ ಯೂನಿವರ್ಸಿಟಿ ಲಾಭ ಪಡೆದುಕೊಳ್ಳಲಿ. 1 ವರೆ ಲಕ್ಷ ಜನ ಆರ್ ಎಎಫ್ ಘಟಕದಲ್ಲಿ ಯೋಧರು ಕೆಲಸ ಮಾಡುತ್ತಿದ್ದಾರೆ. ಇದರ ಆರಂಭಿಸಿದ ಕೀರ್ತಿ ಆಗಿನ ಗೃಹಮಂತ್ರಿ ವಲ್ಲಭ ಬಾಯಿ ಪಟೇಲ್ ಗೆ ಸೇರಬೇಕು. ಸೈಕ್ಲೋನ್, ಅತಿವೃಷ್ಠಿ ಅನಾವೃಷ್ಟಿ, ದೇಶದ ಗಲಭೆಗಳಲ್ಲಿ ಸಿಆರ್‌ಪಿ ಎಫ್ ಯೋಧರ ಅವಶ್ಯಕತೆ ಹೆಚ್ಚಾಗಿದೆ. ಪೊಲೀಸ್ ಮತ್ತು ಆರ್ ಎಎಫ್ ನ್ನ ವಿಭಿನ್ನವಾಗಿ ಕಾಣಬಹುದು, ಪೊಲೀಸ್ ರ ಕರ್ತವ್ಯ ಬೇರೆಯಾಗಿದೆ. ಪೊಲೀಸರ ಕೆಲಸ ದೇಶದ ಎಲ್ಲಾ ಸರ್ಕಾರಿ ನೌಕರರಿಗಿಂತಲೂ ಕಷ್ಟದ ಕೆಲಸ. ಇದರಲ್ಲಿ ಬದಲಾವಣೆ ತರಬೇಕಾಗಿದೆ. ಪೊಲೀಸ್ ಸ್ಮಾರಕವನ್ನ ದೆಹಲಿಯಲ್ಲಿ ಆರಂಭಿಸಲಾಗಿದೆ. ಯಾರಾದರೂ‌ ದೆಹಲಿಗೆ‌ಬಂದರೆ ಭೇಟಿ ನೀಡದೆ ಹೋಗದಿರಿ ಎಂದು ಹೇಳಿದರು.

ಭದ್ರಾವತಿಯಲ್ಲಿ 97 ನೇ ಆರ್ ಎಎಫ್ ಘಟಕ ಉದ್ಘಾಟಿಸಲಾಗಿದೆ. 230 ಕೋಟಿ ವೆಚ್ಚದಲ್ಲಿ ಆರ್ ಎಎಫ್ ಕಚೇರಿ, ಆಸ್ಪತ್ರೆ, ಕೇಂದ್ರಿಯ ಶಾಲೆ ಆಟದ ಮೈದಾನ ಆರಂಭವಾಗಲಿದೆ. ಇದು ಭದ್ರಾವತಿ ಜನತೆಗೂ ಉಪಯೋಗವಾಗಲಿದೆ ಎಂದರು.

ಕೊರೋನ ಕಷ್ಟದಲ್ಲಿ ಜನತೆ ಬಹಳ ಸಂಕಷ್ಟ ಅನುಭವಿಸಿದ್ದಾರೆ. ಆದರೆ ಕೊರೋನ ವಿರುದ್ಧ ಸಮಗ್ರವಾಗಿ ಎದುರಿಸಿದ ದೇಶವೆಂದರೆ ಭಾರತ ಮಾತ್ರ. ಲಸಿಕಾ ಹಂಚಿಕೆಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ಕೊರೋನ ಪರೀಕ್ಷೆಗಾಗಿ ಒಂದೇ ಒಂದು ಲ್ಯಾಬ್ ಇತ್ತು. ಇಂದು 2000 ಕ್ಕೂ ಅಧಿಕ ಕೊರೋನ ಲ್ಯಾಬ್ ಆರಂಭಿಸಲಾಗಿದೆ ಎಂದರು.

ಅತ್ಯಂತ ಕಡಿಮೆದರದಲ್ಲಿ ಭಾರತದಲ್ಲಿ ಕೊರೋನ ಲಸಿಕೆ ಹಂಚಿಕೆಯಾಗುತ್ತಿದೆ. ಹೊರ ದೇಶದಲ್ಲಿ ಕೊರೋನ ಎದುರಿಸಿದ ಪರಿಯು ಬೇರೆ ಆಗಿತ್ತು. ಭಾರತ ಎದುರಿಸಿದ ರೀತಿಯೂ ಬೇರೆಯಾಗಿದೆ. ಲಸಿಕೆಯು ಕೊನೆಯ ಮನುಷ್ಯನಿಗೂ ತಲುಪಿಸುವುದು ಮೋದಿಯವರ ಸಂಕಲ್ಪ ಇಂದು 3000 ಸಾವಿರ ಕೊರೋನ ಲಸಿಕಾ ಬೂತ್ ಗಳಿಂದ ವಾರಿಯರ್ಸ್ ಗೆ ಲಸಿಜೆ ನೀಡಲಾಯಿತು ಎಂದರು. ಕೊರೋನ ವರಿಯರ್ಸ್ ಗೆ ಲಸಿಕೆ ಕೊಡಲು ತೀರ್ಮಾನಿಸಲಾಯಿತು. ಆದರೆ ಇದಕ್ಕೂ ಟೀಕೆ ನಡೆಸಲಾಯಿತು. ನಾವು ಹೆದರದೆ ವಾರಿಯರ್ಸ್ ಗೆ ನೀಡಲು ಮುಂದಾಗಿದ್ದೇವೆ. ಕರ್ನಾಟಕದಲ್ಲಿ 14 ಲಕ್ಷ ಡೋಸೇಜ್ ನ್ನ ಕರ್ನಾಟಕಕ್ಕೆ ನೀಡಲಾಗಿದೆ ಎಂದರು.

ಅವಿಸ್ಮರಣೀಯ ದಿನ, ಭದ್ರಾವತಿಯಲ್ಲಿ ಆರ್ ಎ ಎಫ್ ಆರಂಭಿಸಬೇಕೆಂ‌ಬಹುದಿನದ ಬೇಡಿಕೆ ಆಗಿತ್ತು. ಆಂಧ್ರ, ತಮಿಳು ನಾಡುಗಳಿಂದ ಗಲಭೆ ಕಂಡುಬಂದರೆ ಬರಬೇಕಿತ್ತು. ಆದರೆ ಶಿವಮೊಗ್ಗದಲ್ಲಿಯೇ ಆರಂಭವಾಗುತ್ತಿರುವುದರಿಂದ ಕೇರಳ, ಲಕ್ಷ ದ್ವೀಪ, ಪುದುಚೆರಿ ಗೋವ ರಾಜ್ಯದ 39 ಜಿಲ್ಲೆಗಳು ಇದರ ಕಾರ್ಯ ವ್ಯಾಪ್ತಿಗೆ ಲಭಿಸಿದೆ ಎಂದರು. ಇದು ಬಹಳ ಸಮಯ ಹಾಗೂ ದೂರದ ಪ್ರಯಾಣವನ್ನ ತಗ್ಗಿಸಿದೆ ಎಂದರು.

See also  ಹಿಜ್ಬುಲ್ ಮುಜಾಹಿದ್ದೀನ್ ನ ಮೋಸ್ಟ್ ವಾಟೆಂಡ್ ಉಗ್ರನ ಹತ್ಯೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು