ನವದೆಹಲಿ: ಬಜೆಟ್ ಘೋಷಣೆಗೂ ಮುನ್ನ ಬೆಂಗಳೂರಿನಲ್ಲಿ 24 ಗ್ರಾಂ ಚಿನ್ನದ ಬೆಲೆ 49,970 ರೂ. ಇತ್ತು. ಆದರೆ, ಇಂದು 49,630 ರೂ. ಆಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 45,480 ರೂ. ತಲುಪಿದ್ದು, ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಂತಾಗಿದೆ.
ಬೆಳ್ಳಿ ದರದಲ್ಲೂ ದಾಖಲೆಯ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಬೆಳ್ಳಿ ಬೆಲೆ 70 ಸಾವಿರ ರೂ. ದಾಟಿದೆ. ಸೋಮವಾರ ಬಜೆಟ್ ಘೋಷಣೆಯ ಬಳಿಕ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, 10 ಗ್ರಾಂ ಚಿನ್ನಕ್ಕೆ 1,324 ರೂ. ಕುಸಿತವಾಗುವ ಮೂಲಕ 47,520 ರೂ. ಆಗಿತ್ತು. ಅದೇ ರೀತಿ ಭಾರತದಲ್ಲಿ 1 ಕೆಜಿ ಬೆಳ್ಳಿ ಬೆಲೆ ನಿನ್ನೆ ಸುಮಾರು ಎರಡೂವರೆ ಸಾವಿರದಷ್ಟು ಏರಿಕೆಯಾಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.