News Kannada
Monday, October 03 2022

ದೇಶ-ವಿದೇಶ

ಕೇಂದ್ರ ಸರ್ಕಾರದ ಆದೇಶದ ಮೇರೆಗೆ 500ಕ್ಕೂ ಹೆಚ್ಚು ಟ್ವಿಟರ್ ಅಕೌಂಟ್ ಮೇಲೆ ಕ್ರಮ - 1 min read

Photo Credit :

ಕೇಂದ್ರ ಸರ್ಕಾರದ ಆದೇಶದ ಮೇರೆಗೆ 500ಕ್ಕೂ ಹೆಚ್ಚು ಟ್ವಿಟರ್ ಅಕೌಂಟ್ ಮೇಲೆ ಕ್ರಮ

ನವದೆಹಲಿ: ಟ್ವಿಟ್ಟರ್ ಅಕೌಂಟ್ ಗಳ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡಿರುವ ಟ್ವಿಟ್ಟರ್ ಸಂಸ್ಥೆ, ಟ್ವಿಟರ್ ಮತ್ತು ಅದರಿಂದ ಪರಿಣಾಮ ಬೀರಿದ ಖಾತೆಗಳಿಗೆ ಭಾರತೀಯ ಕಾನೂನಿನಡಿ ಇರುವ ನಿರ್ಬಂಧ ಆಯ್ಕೆಗಳ ಬಗ್ಗೆ ಅನ್ವೇಷಿಸಿದ್ದು, ಅದರ ಅಡಿಯಲ್ಲಿ ಕೆಲವು ಅಕೌಂಟ್ಗಳನ್ನು ಮಾತ್ರ ತಡೆಹಿಡಿದಿದೆ.

ಟ್ವಿಟ್ಟರ್ ಸಂಸ್ಥೆ ಭಾರತ ಸರ್ಕಾರ ಪರಿಶೀಲಿಸಿದ ಕೆಲವು ಅಕೌಂಟ್ ಗಳನ್ನು ಭಾರತದೊಳಗೆ ಮಾತ್ರ ತಡೆಹಿಡಿದಿದೆ. ಆದರೆ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಕಾರಣಕ್ಕೆ ನಾಗರಿಕ ಸಮಾಜ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ಮಾಧ್ಯಮ ವ್ಯಕ್ತಿಗಳ ಅಕೌಂಟ್ ಗಳನ್ನು ತಡೆಹಿಡಿದಿಲ್ಲ ಎಂದು ಟ್ವಿಟರ್ ಸಂಸ್ಥೆ ಸ್ಪಷ್ಟನೆ ನೀಡಿದೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರಚೋದನಾಕಾರಿ ವಿಷಯಗಳನ್ನು ಮತ್ತು ತಪ್ಪು ಮಾಹಿತಿಗಳನ್ನು ಹಲವು ಅಕೌಂಟ್ ಗಳನ್ನು ತೆರೆದು ಹಂಚಿಕೊಳ್ಳುವವರ ಬಗ್ಗೆ ಮಾಹಿತಿ ಕಲೆಹಾಕುವಂತೆ ಸರ್ಕಾರ ಟ್ವಿಟ್ಟರ್ ಇಂಡಿಯಾ ಸಂಸ್ಥೆಗೆ ಸೂಚಿಸಿತ್ತು. ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಬಗ್ಗೆಯೂ ಎಚ್ಚರಿಕೆ ನೀಡಿದೆ. ಈ ಬಗ್ಗೆ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿರುವ ಸಂಸ್ಥೆ, ಸಮಾಜದಲ್ಲಿ ಹಾನಿಯನ್ನುಂಟುಮಾಡುವ ವಿಷಯಗಳನ್ನೊಳಗೊಂಡ ಹ್ಯಾಶ್ ಟಾಗ್ ಗಳನ್ನು ಹೊಂದಿರುವ ಟ್ವೀಟ್ ಗಳು ಕಡಿಮೆ ಗೋಚರವಾಗುವಂತೆ, ಅವು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗದಂತೆ ಮತ್ತು ಶಿಫಾರಸಿನ ಶೋಧ ನಿಯಮದಡಿ ಗೋಚರವಾಗುವಂತೆ ಮಾಡಲಾಗುವುದು ಎಂದು ಹೇಳಿದೆ. ಹಾಗೆಯೇ, ಈ ಎಲ್ಲಾ ದೂರಿನ ಆಧಾರದ ಮೇಲೆ 500ಕ್ಕೂ ಹೆಚ್ಚು ಟ್ವಿಟ್ಟರ್ ಅಕೌಂಟ್ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದೆ.

See also  ಪತ್ನಿಯ ಹಲ್ಲು ವಕ್ರವಾಗಿದೆಯೆಂದು ಪತಿಯಿಂದ ತ್ರಿವಳಿ ತಲಾಖ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು