News Kannada
Monday, October 03 2022

ದೇಶ-ವಿದೇಶ

ಕಾರಿನ ಟಾಪ್ ಮೇಲೆ ಮೃತದೇಹವನ್ನು 10 ಕಿ.ಮೀ ದೂರ ಹೊತ್ತೊಯ್ದ ಚಾಲಕ ಅಂದರ್ - 1 min read

Photo Credit :

ಕಾರಿನ ಟಾಪ್ ಮೇಲೆ ಮೃತದೇಹವನ್ನು 10 ಕಿ.ಮೀ ದೂರ ಹೊತ್ತೊಯ್ದ ಚಾಲಕ ಅಂದರ್

ಪಂಜಾಬ್ : ಮೃತದೇಹವನ್ನು ಕಾರಿನ ಟಾಪ್ ಮೇಲೆ ಹೊತ್ತು10 ಕಿ.ಮೀ ದೂರ ಪ್ರಯಾಣಿಸಿದ್ದ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ಅಪಘಾತಕ್ಕೀಡಾಗಿದ್ದ ಸೈಕಲ್ ಸವಾರನ ಮೃತದೇಹ ಕಾರಿನ ಟಾಪ್ ಮೇಲೆ ಹೊತ್ತು ಹೋದ ಕಾರು ಚಾಲಕನನ್ನು ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿದೆ.

ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಸೈಕಲ್ ಸವಾರನಿಗೆ ಡಿಕ್ಕಿಹೊಡೆದ ನಂತರ ಅಪಘಾತದ ರಭಸಕ್ಕೆ ಸೈಕಲ್ ಸವಾರನ ದೇಹ ಕಾರ್ ಮೇಲೆ ಹಾರಿ ಬಿದ್ದಿತ್ತು. ಇದನ್ನು ಗಮನಸಿದ್ದರೂ ಕೂಡ ಕಾರು ನಿಲ್ಲಿಸದ ನಿರ್ಮಲ್ ಸಿಂಗ್, ಸುಮಾರು 10 ಕಿ.ಮೀ ವರೆಗೆ ಕಾರು ಚಲಾಯಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಮೃತ ದೇಹ ಬೀಸಾಕಿ ಪರಾರಿಯಾಗಿದ್ದಾನೆ.

ಘಟನೆಯ ವಿಡಿಯೋ ಅಪಘಾತ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

See also  ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ: ಐವರ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು