ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಸೆಗಿದ ಆರೋಪಿಗೆ ಮದುವೆಯಾಗಲು ಸಿದ್ಧರಿರುವಿರಾ ಎಂದು ಕೇಳಿದ್ದ ಸುಪ್ರೀಂಕೋರ್ಟ್ ಬಗ್ಗೆ ತೀವ್ರ ವ್ಯಕ್ತವಾಗಿದ್ದ ಬೆನ್ನಲ್ಲೇ, ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೋಮವಾರ ಅಭಿಪ್ರಾಯಪಟ್ಟಿದೆ ಮತ್ತು ನ್ಯಾಯಾಂಗದ ಖ್ಯಾತಿಯು ಅದರ ವಕೀಲರ ಕೈಯಲ್ಲಿದೆ ಎಂದು ಹೇಳಿದೆ.
14 ವರ್ಷದ ಗರ್ಭಿಣಿ ಸಂತ್ರಸ್ಥೆಯ ಅರ್ಜಿ ವಿಚಾರಣೆ ನಡೆಸುತಿದ್ದ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳು ಕೇಳಿಬಂದಿದ್ದು, ಈ ಟೀಕೆಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ವಿ ರಾಮಸುಬ್ರಹ್ಮಣಿಯನ್ನು ಅವರನ್ನೊಳಗೊಂಡ ಪೀಠ ಈ ಹೇಳಿಕೆ ನೀಡಿದೆ.
ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಿಪಿಪಿ(ಎಂ) ಪಾಲಿಟ್ ಬ್ಯೂರೊ ಬೃಂದಾ ಕಾರೆಟ್ ಪತ್ರ ಬರೆದಿದ್ದರು. ಮುಖ್ಯ ನ್ಯಾಯಮೂರ್ತಿಗಳ ಕ್ಷಮೆಗೆ ಒತ್ತಾಯಿಸಿ ಅನೇಕ ಮಹಿಳಾ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಬಹಿರಂಗವಾಗಿ ಪತ್ರ ಬರೆದಿದ್ದರು.
ಈ ಹಿಂದಿನ ಪ್ರಕರಣವನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ. ನ್ಯಾಯಾಂಗದ ಖ್ಯಾತಿಯೂ ಯಾವಾಗಲೂ ವಕೀಲರ ಕೈಯಲ್ಲಿದೆ ಎಂದು ಈ ಪ್ರಕರಣದಲ್ಲಿ ಭಾಗಿಯಾದ ವಕೀಲರ ಕುರಿತು ನ್ಯಾಯಾಲಯ ಹೇಳಿತು.