ಇಸ್ಲಾಮಾಬಾದ್ : ವಿಶ್ವದ ವಾಯು ಮಾಲಿನ್ಯ ರಾಷ್ಟ್ರಗಳ ಪೈಕಿ ಅತೀ ಕಲುಷಿತ ದೇಶಗಳಲ್ಲಿ ಎರಡನೆ ಸ್ಥಾನದಲ್ಲಿ ಪಾಕಿಸ್ತಾನ ಗುರುತಿಸಿಕೊಂಡಿದೆ.
ಜಾಗತಿಕ ಮಟ್ಟದಲ್ಲಿ ಅತಿ ಕಲುಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ಪ್ರತಿಸ್ಥಾನ ಅಪಕೀರ್ತಿಗೆ ಪಾತ್ರವಾಗಿದ್ದು,.ಜಾಗತಿಕ ವಾಯು ಗುಣಮಟ್ಟ ನಿರ್ಧರಿಸಿರುವ ಐಕ್ಯು ಏರ್ ವರದಿಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ.
ಅದರಲ್ಲಿಯೂ, ಲಾಹೋರ್ ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿರುವ ನಗರವಾಗಿದೆ.ಆದರೆ ಪಾಕಿಸ್ತಾನದ ನಗರಗಳ ಪೈಕಿ ಇಸ್ಲಾಮಾಬಾದ್ ಸ್ವಚ್ಚ ನಗರವಾಗಿ ಗುರುತಿಸಿಕೊಂಡಿದೆ . ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ಎಚ್ಚರಿಕೆ ನೀಡುತ್ತೇವೆ.