News Kannada
Friday, December 02 2022

ದೇಶ-ವಿದೇಶ

ನವಜಾತ ಶಿಶುವಿನ ಹೆಣವನ್ನು ಕಚ್ಚಿಕೊಂಡು ಓಡಿದ ಬೀದಿ ನಾಯಿ

Photo Credit :

ನವಜಾತ ಶಿಶುವಿನ ಹೆಣವನ್ನು ಕಚ್ಚಿಕೊಂಡು ಓಡಿದ ಬೀದಿ ನಾಯಿ

ಒಡಿಶಾ: ನವಜಾತ ಶಿಶುವಿನ ಮೃತ ದೇಹಗಳು ಬೀದಿ ನಾಯಿಯೊಂದು ಕಚ್ಚಿಕೊಂಡು ಓಡಿಹೋಗುತ್ತಿದ್ದ ಅಂತಹ ದೃಶ್ಯ ಒಡಿಶಾದ ಭದ್ರಾಕ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಳಗೆ ನಡೆದಿದೆ.

ವರದಿಗಳ ಪ್ರಕಾರ, ಬೀದಿ ನಾಯಿ ಏಕಾಏಕಿ ಸರ್ಕಾರಿ ಆಸ್ಪತ್ರೆ ಹೇಳಬೇಕಿದ್ದ ನವಜಾತ ಶಿಶುವಿನ ಹೆಣವನ್ನು ಕಚ್ಚಿಕೊಂಡು ಸರ್ಕಾರಿ ಆಸ್ಪತ್ರೆಯ ಆವರಣದೊಳಗೆ ಓಡಿ ಹೋಗುತ್ತಿರುವುದನ್ನು ಸಿಬಂದಿಗಳು, ಜನರು ಗಮನಿಸಿದ್ದರು. ಬಳಿಕ ಜನರು ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಶವವನ್ನು ಬಿಟ್ಟು ನಾಯಿ ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೀದಿ ನಾಯಿ ನವಜಾತ ಹೆಣ್ಣುಮಗುವಿನ ಶವವನ್ನು ಕಚ್ಚಿಕೊಂಡು ಆಸ್ಪತ್ರೆಯ ಆವರಣದಲ್ಲಿ ಸುತ್ತಾಡುತ್ತಿತ್ತು. ಆ ಮಗು ಜೀವಂತವಾಗಿದೆ ಎಂದು ಭಾವಿಸಿ, ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಅದು ಶವವನ್ನು ಬಿಟ್ಟು ಓಡಿ ಹೋಗಿತ್ತು ಎಂದು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತ್ಯದರ್ಶಿಗಳು ಭಯವನ್ನು ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಆವರಣದೊಳಗೆ ಒಂದು ವೇಳೆ ಇಂತಹ ಘಟನೆಗಳು ನಡೆಯುತ್ತಿದ್ದರೆ, ನವಜಾತ ಶಿಶುಗಳನ್ನು ಚಿಕಿತ್ಸೆಗೆ ಹೇಗೆ ಕರೆತರಲಿ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

See also  ಮತ ಎಣಿಕೆ ಕೇಂದ್ರಗಳ ಬಳಿ ಸಂಭ್ರಮಾಚರಣೆ ಬೇಡ: ಡಿಎಂಕೆ ಪಕ್ಷದ ಅಧ್ಯಕ್ಷ ಎಂ. ಕೆ. ಸ್ಟಾಲಿನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು