News Kannada
Monday, December 05 2022

ದೇಶ-ವಿದೇಶ

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತ ಪ್ರಕಟ: ಕನ್ನಡದ ‘ಅಕ್ಷಿ’ ಸೇರಿ ಅಸುರನ್, ಜರ್ಸಿಗೆ‌ ಉತ್ತಮ ಚಿತ್ರ ಗರಿ

Photo Credit :

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತ ಪ್ರಕಟ: ಕನ್ನಡದ 'ಅಕ್ಷಿ' ಸೇರಿ ಅಸುರನ್, ಜರ್ಸಿಗೆ‌ ಉತ್ತಮ ಚಿತ್ರ ಗರಿ

ಹೊಸದಿಲ್ಲಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆಗಿದ್ದು, ‘ಅಕ್ಷಿ’ ಸಿನಿಮಾಗೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ. ಕೋವಿಡ್‌ ಕಾರಣದಿಂದಾಗಿ ಈ ಸಾರಿ ಸಿನಿಮಾ ಪ್ರಶಸ್ತಿಗಳು ತಡವಾಗಿ ಪ್ರಕಟವಾಗಿವೆ.

ಮೇ. 3ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಫೀಚರ್ ಫಿಲ್ಮ್ ವಿಭಾಗದಲ್ಲಿ 461 ಚಿತ್ರಗಳು ಮತ್ತು ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ 220 ಚಲನಚಿತ್ರಗಳಿದ್ದವು.

ನಾನ್ ಫೀಚರ್ ಫಿಲ್ಮ್ ವರ್ಗದಲ್ಲಿ, ಅತ್ಯುತ್ತಮ ನಿರೂಪಣೆ: ವೈಲ್ಡ್ ಕರ್ನಾಟಕ, ಸರ್ ಡೇವಿಡ್ ಅಟೆನ್‌ಬರೋ, ಅತ್ಯುತ್ತಮ ಸಂಪಾದನೆ: ಶಟ್ ಅಪ್ ಸೋನಾ, ಅರ್ಜುನ್ ಗೌರಿಸೇರಿಯಾಅತ್ಯುತ್ತಮ ಆಡಿಯೋಗ್ರಫಿ: ರಾಧಾ (ಮ್ಯೂಸಿಕಲ್), ಆಲ್ವಿನ್ ರೆಗೊ ಮತ್ತು ಸಂಜಯ್ ಮೌರ್ಯ, ಅತ್ಯುತ್ತಮ ಆನ್-ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್: ರಾಹಾಸ್ (ಹಿಂದಿ), ಸಪ್ತರ್ಶಿ ಸರ್ಕಾರ್, ಅತ್ಯುತ್ತಮ ಛಾಯಾಗ್ರಹಣ: ಸೊನ್ಸಿ, ಸವಿತಾ ಸಿಂಗ್, ಅತ್ಯುತ್ತಮ ನಿರ್ದೇಶನ: ನಾಕ್ ನಾಕ್ ನಾಕ್ (ಇಂಗ್ಲಿಷ್ / ಬಂಗಾಳಿ), ಸುಧಾನ್ಶು ಸಾರಿಯಾ, ಕುಟುಂಬ ಮೌಲ್ಯಗಳ ಅತ್ಯುತ್ತಮ ಚಿತ್ರ: ಒರು ಪಾತಿರಾ ಸ್ವಪ್ನಮ್ ಧ್ರುವ (ಮಲಯಾಳಂ), ಅತ್ಯುತ್ತಮ ಕಿರುಕಥೆ: ಕಸ್ಟಡಿ (ಹಿಂದಿ / ಇಂಗ್ಲಿಷ್), ತೀರ್ಪುಗಾರರ ವಿಶೇಷ ಪ್ರಶಸ್ತಿ: ಸ್ಮಾಲದ ಸ್ಕೇಲ್ ಸೊಸೈಟೀಸ್ (ಇಂಗ್ಲಿಷ್), ಅತ್ಯುತ್ತಮ ಆನಿಮೇಷನ್ ಚಿತ್ರ: ರಾಧಾ (ಸಂಗೀತ), ಅತ್ಯುತ್ತಮ ತನಿಖಾ ಚಿತ್ರ: ಜಕ್ಕಲ್, ಅತ್ಯುತ್ತಮ ಪರಿಶೋಧನಾ ಚಿತ್ರ: ವೈಲ್ಡ್ ಕರ್ನಾಟಕ (ಇಂಗ್ಲಿಷ್), ಅತ್ಯುತ್ತಮ ಶಿಕ್ಷಣ ಚಿತ್ರ: ಆಪಲ್ಸ್ ಅಂಡ್ ಆರೆಂಜಸ್ (ಇಂಗ್ಲಿಷ್), ಸಾಮಾಜಿಕ ಸಮಸ್ಯೆಗಳ ಕುರಿತು ಅತ್ಯುತ್ತಮ ಚಿತ್ರ: ಹೋಲಿ ರೈಟ್ಸ್ (ಹಿಂದಿ) ಮತ್ತು ಲಾಡ್ಲಿ (ಹಿಂದಿ), ಅತ್ಯುತ್ತಮ ಪರಿಸರ ಚಲನಚಿತ್ರ: ದ ಸ್ಟಾರ್ಕ್ ಸೇವಿಯರ್ಸ್ (ಹಿಂದಿ), ಅತ್ಯುತ್ತಮ ಪ್ರಚಾರ ಚಿತ್ರ: ಶವರ್ (ಹಿಂದಿ), ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಲನಚಿತ್ರ: ಶ್ರೀಕ್ಷೇತ್ರ-ರು-ಸಾಜಿತಾ (ಒಡಿಯಾ), ಅತ್ಯುತ್ತಮ ಜೀವನಚರಿತ್ರೆಯ ಚಿತ್ರ: ಎಲಿಫೆಂಟ್ಸ್ ಡು ರಿಮೆಂಬರ್ (ಇಂಗ್ಲಿಷ್), ಅತ್ಯುತ್ತಮ ಎಥ್ನೊಗ್ರಾಫಿಕ್ ಫಿಲ್ಮ್: ಚರಣ್-ಅಟ್ವಾ ದಿ ಎಸೆನ್ಸ್ ಆಫ್ ಬೀಯಿಂಗ್ ಎ ನೋಮಾಡ್ (ಗುಜರಾತಿ), ನಿರ್ದೇಶಕರ ಅತ್ಯುತ್ತಮ ಚೊಚ್ಚಲ ನಾನ್ ಫಿಚರ್ ಚಿತ್ರ: ಖಿಸಾ (ಮರಾಠಿ), ಅತ್ಯುತ್ತಮ ನಾನ್ ಫೀಚರ್ ಚಿತ್ರ: ಎಂಜಿನಿಯರಿಂಗ್ ಕನಸು (ಹಿಂದಿ) ಗೆ ದೊರೆತಿದೆ. 

 ಇನ್ನು ಫೀಚರ್ ಫಿಲ್ಮ್ಸ್ ವರ್ಗದಲ್ಲಿ, ವಿಶೇಷ ಉಲ್ಲೇಖ: ಬಿರಿಯಾನಿ (ಮಲಯಾಳಂ), ಜೊನಕಿ ಪೊರುವಾ (ಅಸ್ಸಾಮೀಸ್), ಲತಾ ಭಗವಾನ್ ಕರೇ (ಮರಾಠಿ), ಪಿಕಾಸೊ (ಮರಾಠಿ), ಅತ್ಯುತ್ತಮ ತುಳು ಚಿತ್ರ: ಪಿಂಗಾರಾ, ಅತ್ಯುತ್ತಮ ಪಾಣಿಯಾ ಚಿತ್ರ: ಕೆಂಜೀರಾ, ಅತ್ಯುತ್ತಮ ಮಿಶಿಂಗ್ ಚಿತ್ರ: ಅನು ರುವಾಡ್, ಅತ್ಯುತ್ತಮ ಖಾಸಿ ಚಲನಚಿತ್ರ: ಲೆವ್ದುಹ್, ಅತ್ಯುತ್ತಮ ಹರಿಯಾನ್ವಿ ಚಿತ್ರ: ಚೋರಿಯಾ ಚೋರೊನ್ ಸೆ ಕಾಮ್ ನಹಿ ಹೋತಿ, ಅತ್ಯುತ್ತಮ ಛತ್ತೀಸ್​ಘರೀ ಚಲನಚಿತ್ರ: ಭೂಲನ್ ದಿ ಮೇಜ್, ಅತ್ಯುತ್ತಮ ತೆಲುಗು ಚಲನಚಿತ್ರ: ಜರ್ಸಿ, ಅತ್ಯುತ್ತಮ ತಮಿಳು ಚಿತ್ರ: ಅಸುರನ್, ಅತ್ಯುತ್ತಮ ಪಂಜಾಬಿ ಚಲನಚಿತ್ರ: ರಬ್ ದ ರೇಡಿಯೋ 2,ಅತ್ಯುತ್ತಮ ಒಡಿಯಾ ಚಿತ್ರ: ಸಲಾ ಬುಧರ್ ಬದ್ಲಾ ಮತ್ತು ಕಲಿರಾ ಅತಿಟಾ, ಅತ್ಯುತ್ತಮ ಮಣಿಪುರಿ ಚಿತ್ರ: ಈಗಿ ಕೋನಾ,ಅತ್ಯುತ್ತಮ ಮಲಯಾಳಂ ಚಿತ್ರ: ಕಲ್ಲಾ ನೋಟಂ, ಅತ್ಯುತ್ತಮ ಮರಾಠಿ ಚಿತ್ರ: ಬಾರ್ಡೋ, ಅತ್ಯುತ್ತಮ ಕೊಂಕಣಿ ಚಲನಚಿತ್ರ: ಕಾಜ್ರೊ, ಅತ್ಯುತ್ತಮ ಕನ್ನಡ ಚಿತ್ರ: ಅಕ್ಷಿ, ಅತ್ಯುತ್ತಮ ಹಿಂದಿ ಚಲನಚಿತ್ರ: ಚಿಚೋರೆ, ಅತ್ಯುತ್ತಮ ಬಂಗಾಳಿ ಚಲನಚಿತ್ರ: ಗುಮ್ನಾಮಿ, ಅತ್ಯುತ್ತಮ ಅಸ್ಸಾಮೀಸ್ ಚಲನಚಿತ್ರ: ರೋನುವಾ- ಹೂ ನೆವರ್ ಸರೆಂಡರ್, ಅತ್ಯುತ್ತಮ ಸಾಹಸ: ಅವನೇ ಶ್ರೀಮನ್ನಾರಾಯಣ (ಕನ್ನಡ), ಅತ್ಯುತ್ತಮ ನೃತ್ಯ ಸಂಯೋಜನೆ: ಮಹರ್ಷಿ (ತೆಲುಗು), ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಮರಕ್ಕರ್- ಅರಬ್, ತೀರ್ಪುಗಾರರ ವಿಶೇಷ ಪ್ರಶಸ್ತಿ: ಒಥಾ ಸೆರುಪ್ಪು ಗಾತ್ರ -7 (ತಮಿಳು), ಅತ್ಯುತ್ತಮ ಸಾಹಿತ್ಯ: ಕೋಲಾಂಬಿ ದೊರೆತಿದೆ.

See also  ಮುಂಬಯಿ ಪ್ರಾದೇಶಿಕ ಸಮಿತಿಯ ಗೌರವ ಅಧ್ಯಕ್ಷರಾಗಿ ಬಿ. ವಿವೇಕ್ ಶೆಟ್ಟಿ

 

 ಅಂತೆಯೇ ಅತ್ಯುತ್ತಮ ಚಿತ್ರಕಥೆಯಾಗಿ, ಮೂಲ ಚಿತ್ರಕಥೆ: ಜ್ಯಶ್ಚೋಪುತ್ರಿ, ರೂಪಾಂತರಗೊಂಡ ಚಿತ್ರಕಥೆ: ಗುಮ್ನಾಮಿ, ಸಂಭಾಷಣೆ ಬರಹಗಾರ: ತಾಷ್ಕೆಂಟ್ ಫೈಲ್ಸ್ (ಹಿಂದಿ), ಅತ್ಯುತ್ತಮ ಛಾಯಾಗ್ರಹಣ: ಜಲ್ಲಿಕೆಟ್ಟು (ಮಲಯಾಳಂ), ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕ: ಬಾರ್ಡೋ (ಮರಾಠಿ), ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಕೇಸರಿ, ತೇರಿ ಮಿಟ್ಟಿ (ಹಿಂದಿ), ಅತ್ಯುತ್ತಮ ಪೋಷಕ ನಟಿ: ತಾಷ್ಕೆಂಟ್ ಫೈಲ್ಸ್, ಪಲ್ಲವಿ ಜೋಶಿ, ಅತ್ಯುತ್ತಮ ಪೋಷಕ ನಟ: ಸೂಪರ್ ಡಿಲಕ್ಸ್, ವಿಜಯ ಸೇತುಪತಿ, ಅತ್ಯುತ್ತಮ ನಟಿ: ಕಂಗನಾ ರಣಾವತ್ (ಮಣಿಕರ್ಣಿಕಾ, ಪಂಗಾ), ಅತ್ಯುತ್ತಮ ನಟ: ಮನೋಜ್ ಬಾಜಪೇಯಿ (ಭೋಂಸ್ಲೆ) ಮತ್ತು ಧನುಷ್ (ಅಸುರನ್), ಅತ್ಯುತ್ತಮ ನಿರ್ದೇಶನ: ಬಹಟ್ಟರ್ ಹುರೈನ್, ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ), ಪರಿಸರ ಸಂರಕ್ಷಣೆ ಕುರಿತು ಅತ್ಯುತ್ತಮ ಚಿತ್ರ: ವಾಟರ್ ಬರಿಯಲ್ನಿ, ರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಹೆಲೆನ್ (ಮಲಯಾಳಂ), ಅತ್ಯುತ್ತಮ ಚಲನಚಿತ್ರ: ಮರಕ್ಕರ್ ಲಯನ್ ಆಫ್ ಅರೇಬಿಯನ್ ಸೀ (ಮಲಯಾಳಂ) ಗೆ ದೊರೆತಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು