News Kannada
Thursday, December 08 2022

ದೇಶ-ವಿದೇಶ

ರಾಜಾಸ್ಥಾನದ ಅಜ್ಜನನ್ನು ಹುಡುಕಿಕೊಂಡು ಬಂದ ಆಸ್ಟ್ರೇಲಿಯಾದ ಪ್ರೇಯಸಿ ; ಈ ಅಪರೂಪದ ಪ್ರೀತಿಗೆ ೫೦ ವರ್ಷದ ಇತಿಹಾಸ !

Photo Credit :

ರಾಜಾಸ್ಥಾನದ   ಅಜ್ಜನನ್ನು ಹುಡುಕಿಕೊಂಡು ಬಂದ ಆಸ್ಟ್ರೇಲಿಯಾದ ಪ್ರೇಯಸಿ ; ಈ ಅಪರೂಪದ ಪ್ರೀತಿಗೆ ೫೦ ವರ್ಷದ ಇತಿಹಾಸ !

ರಾಜಸ್ಥಾನದ ಥಾರ್ ಮರುಭೂಮಿಯ ಹೃದಯಭಾಗದಲ್ಲಿರುವ ಕುಲಧಾರ ಪಟ್ಟಣವು 19 ನೇ ಶತಮಾನದಿಂದಲೂ ಜನವಾಸವಿಲ್ಲದೆ ಬಣಗುಡುತ್ತಿದೆ. ಈ ಪ್ರದೇಶದಲ್ಲಿ ನಕಾರಾತ್ಮಕ ಶಕ್ತಿಗಳು ವಾಸಿಸುತ್ತಿವೆ ಎಂದು ನಂಬಲಾಗಿದ್ದು ಸದಾ ಮೌನ ನೆಲೆಗೊಂಡಿರುತ್ತದೆ. ಈ‌ ಪಟ್ಟಣವು ಏಕೈಕ‌ ನಿವಾಸಿಯನ್ನು ಹೊಂದಿದೆ. 82 ವರ್ಷದ ದ್ವಾರಪಾಲಕರೊಬ್ಬರು ಎಲ್ಲಾ ಗಾಳಿ ಸುದ್ದಿಗಳ ನಡುವೆಯೂ ಬದುಕಿನ ಬಹುಪಾಲು ಅವಧಿಯನ್ನು ಅಲ್ಲೇ ಕಳೆದಿದ್ದಾರೆ. ಅವರು ತಮ್ಮ ಮೊದಲ ಪ್ರೀತಿಯ ಕುರಿತು ‘humans of Bombay’ ಜೊತೆ ಇತ್ತೀಚಿಗೆ ಮಾತಾಡಿದ್ದರು.‌ಈ ಮೂಲಕ ಆ ಊರಿನ ಬಗೆಗಿನ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಆಸ್ಟ್ರೇಲಿಯಾದ ಮರೀನಾಳನ್ನು ಮೊದಲ ಬಾರಿಗೆ ಭೇಟಿಯಾದಾಗ ನಾನು 30 ರ ಹರೆಯದ ಯುವಕ. ಆಕೆ ಮರುಭೂಮಿ ಸಫಾರಿಗಾಗಿ ಆಸ್ಟ್ರೇಲಿಯಾದಿಂದ ಜೈಸಲ್ಮೇರ್‌ಗೆ ಬಂದಿದ್ದಳು. ಇದು 5 ದಿನಗಳ ಪ್ರವಾಸವಾಗಿತ್ತು ಮತ್ತು ನಾನು ಅವಳಿಗೆ ಒಂಟೆ ಸವಾರಿ ಮಾಡಲು ಕಲಿಸಿದೆ! ಅದು 1970 ರ ದಶಕದ ಪ್ರೀತಿ, ಆಗ ಮೊದಲ ನೋಟದಲ್ಲಿ ಪ್ರೀತಿ‌ ಆಗಿ ಬಿಟ್ಟಿತ್ತ್ತು” ಎಂದು ಗೇಟ್‌ಕೀಪರ್ ತಮ್ಮ ಹೃದಯ ಸ್ಪರ್ಶಿ ಪ್ರೇಮಕಥೆಯನ್ನು ನೆನಪಿಸಿಕೊಳ್ಳುತ್ತಾರೆ. ಅವರ ಪ್ರಕಾರ ಇಬ್ಬರಿಗೂ ಅದು ಮೊದಲ ನೋಟದಲ್ಲಿ ಉಂಟಾದ ಪ್ರೀತಿ. ಮರೀನಾ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು‌ ತನ್ನ ನವಿರು ಭಾವನೆಗಳ ಬಗ್ಗೆ ಮುಕ್ತವಾಗಿ‌ ಹಂಚಿಕೊಂಡು “ಐ ಲವ್ ಯು” ಎಂದು ಹೇಳಿದ್ದರು. ಆ ಕ್ಷಣಕ್ಕೆ ಮಾತು ಮರೆತ ಗೇಟ್ ಕೀಪರ್ ಸುಮ್ಮನಾಗಿದ್ದರಂತೆ. ಆದರೆ ಆಕೆ ಅವರ ಮೌನವನ್ನು ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ ಅವರು. ಮರೀನಾ ಆಸ್ಟ್ರೇಲಿಯಾಕ್ಕೆ ಮರಳಿದ ನಂತರವೂ ಇಬ್ಬರು ಸಂಪರ್ಕದಲ್ಲಿರುತ್ತಾರೆ.

ಆ ಬಳಿಕ ಮರೀನಾ ಆಸ್ಟ್ರೇಲಿಯಾಕ್ಕೆ‌‌ ಅವರನ್ನು ಆಮಂತ್ರಿಸುತ್ತಾರೆ. ತನ್ನ ಪ್ರಿಯತಮೆಯನ್ನು ಸೇರುವ ಉದ್ದೇಶದಿಂದ‌ ಕುಟುಂಬಸ್ಥರಿಗೆ ಯಾವ ಮಾಹಿತಿಯನ್ನೂ ನೀಡದೆ ಅಂದಿನ ಕಾಲಕ್ಕೆ ತುಂಬಾ ದೊಡ್ಡ ಮೊತ್ತ ಅನ್ನಿಸಿಕೊಂಡಿದ್ದ 30,000 ರೂ ಸಾಲ ಮಾಡಿ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲೇ ಮೂರು ತಿಂಗಳುಗಳ ಕಾಲ ತಂಗುತ್ತಾರೆ. ಆ 3 ತಿಂಗಳುಗಳು ಮಾಂತ್ರಿಕವಾಗಿತ್ತು. ಅವಳು ನನಗೆ ಇಂಗ್ಲಿಷ್ ಕಲಿಸಿದಳು, ನಾನು ಅವಳಿಗೆ ಘೂಮರ್ ಮಾಡಲು ಕಲಿಸಿದೆ. ನಂತರ ಅವಳು ‘ನಾವು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸೋಣ’ ಎಂದಳು. ಅಲ್ಲಿಂದಾಚೆ ವಿಚಾರಗಳು‌ ಜಟಿಲವಾಗುತ್ತಾ ಹೋದವು”ಎಂದು ಅವರು ಹೇಳುತ್ತಾರೆ. ಅವರು ಭಾರತ ಬಿಟ್ಟು ಹೋಗಲು ತಯಾರಿರಲಿಲ್ಲ, ಮರೀನಾ ಭಾರತಕ್ಕೆ ಬಂದು ನೆಲೆಸಲು ತಯಾರಿರಲಿಲ್ಲ. ಭಾರವಾದ ಹೃದಯದೊಂದಿಗೆ ಒಬ್ಬರಿಗೊಬ್ಬರು ವಿದಾಯ ಹೇಳಿದರು.
ಮನೆಗೆ ಹಿಂದಿರುಗಿದ ಅವರು ತಮ್ಮ ಕುಟುಂಬದ ಒತ್ತಡಕ್ಕೆ ಮಣಿದು ಮದುವೆಯಾದರು ಮತ್ತು ಕುಲಧಾರದ ದ್ವಾರಪಾಲಕರಾಗಿ ಕೆಲಸ ಕೈಗೆತ್ತಿಕೊಂಡರು. “ಆದರೆ ನಾನು ಆಗಾಗ್ಗೆ ಮರೀನಾ ಬಗ್ಗೆ ಯೋಚಿಸುತ್ತಿದ್ದೆ, ಅವಳು ಮದುವೆಯಾಗಬಹುದೇ? ನಾನು ಅವಳನ್ನು ಮತ್ತೆ ನೋಡಬಹುದೇ? ಆದರೆ ಅವಳಿಗೆ ಪತ್ರ ಬರೆಯಲು ನನಗೆ ಎಂದಿಗೂ ಧೈರ್ಯವಿರಲಿಲ್ಲ” ಎಂದು ಅವರು ನೆನಪಿಸಿಕೊಂಡು ಭಾವುಕರಾಗುತ್ತಾರೆ. ಈಗ ಅವರ ಪತ್ನಿ ನಿಧನವಾಗಿ ಎರಡು ವರ್ಷಗಳಾಗಿವೆ. ಗಂಡು ಮಕ್ಕಳು ಸ್ವತಂತ್ರವಾಗಿ ಬದುಕುತ್ತಿದ್ದಾರೆ. “ನಾನೀಗ 82 ವರ್ಷದ ವ್ಯಕ್ತಿಯಾಗಿದ್ದೇನೆ ಮತ್ತು ಭಾರತದ ಜನವಸತಿಯಿಲ್ಲದ, ನಕಾರಾತ್ಮಕ ಶಕ್ತಿಗಳಿವೆ ಎಂದು ನಂಬಲ್ಪಟ್ಟಿರುವ ಹಳ್ಳಿಯೊಂದರಲ್ಲಿ ದ್ವಾರಪಾಲಕನಾಗಿದ್ದೇನೆ. ಮತ್ತು ಬದುಕು ಇನ್ನು ಮುಂದೆ ಯಾವುದೇ ಅಚ್ಚರಿಯನ್ನು ನೀಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಅಚ್ಚರಿಯೊಂದು ಕಾದಿತ್ತು….! ಒಂದು ತಿಂಗಳ ಹಿಂದೆ, ಮರೀನಾ ನನಗೆ ಪತ್ರ ಬರೆದು ‘ಗೆಳೆಯಾ, ಹೇಗಿದ್ದೀಯಾ?’ ಎಂದು ಕೇಳಿದಳು. 50 ವರ್ಷಗಳ ನಂತರ, ಅವಳು ನನ್ನನ್ನು ಕಂಡುಕೊಂಡಳು! ಅಂದಿನಿಂದ, ಅವಳು ಪ್ರತಿದಿನ ನನ್ನೊಂದಿಗೆ ಮಾತಾನಾಡುತ್ತಾಳೆ. ಚರ್ಚಿಸಲು, ಬದುಕಲು ನಮಗೆ ವಿಷಯಗಳಿವೆ!” ಎನ್ನುತ್ತಾರೆ ಅವರು.
ತಾನು ಇಂದಿಗೂ ಮದುವೆಯಾಗಲಿಲ್ಲ ಮತ್ತು ಶೀಘ್ರದಲ್ಲೇ ಭಾರತಕ್ಕೆ ಬರಲು ಯೋಜಿಸುತ್ತಿದ್ದೇನೆ ಎಂದು ಮರೀನಾ ಅವರಿಗೆ ಹೇಳಿದ್ದಾರಂತೆ. “ರಾಮನ ಮೇಲಾಣೆ, ನಾನು ಮತ್ತೆ 21 ವರ್ಷದವನಾಗಿದ್ದೇನೆ!, ಭವಿಷ್ಯವು ನನಗಾಗಿ ಏನನ್ನು ಬಚ್ಚಿಟ್ಟುಕೊಂಡಿದೆ ಎಂದು ತಿಳಿದಿರಲ್ಲಿಲ್ಲ, ಆದರೆ ನನ್ನ ಮೊದಲ ಪ್ರೀತಿ ನನ್ನ ಜೀವನಕ್ಕೆ ಮರಳಿದೆ ಆ ಭಾವನೆಯನ್ನು ನನಗೆ ವಿವರಿಸಲು ಸಾಧ್ಯವಿಲ್ಲದ ” ಎಂದು ಸಂತಸ ವ್ಯಕ್ತಪಡಿಸುತ್ತಾರೆ. ರಾಜಸ್ಥಾನದ ಇಳಿ ವಯಸ್ಸಿನ ದ್ವಾರಪಾಲಕನ ಬದುಕು ಒಂದಿಡೀ ಸುತ್ತು ತಿರುಗಿ ಬಂದು‌ ಈಗ ಮತ್ತೆ ಸಂತಸದ ಕೇಂದ್ರ ಬಿಂದುವಿನಲ್ಲಿ ಬಂದು‌ ನಿಂತಿದೆ. ಪರಿಧಿಗಿರುವ ದೂರ ಅಳತೆ ಮೀರಿದ್ದು. ಎಲ್ಲಿಯ ರಾಜಸ್ಥಾನ, ಎಲ್ಲಿಯ ಆಸ್ಟ್ರೇಲಿಯಾ! ಪ್ರೀತಿ ಗಡಿಗಳನ್ನು ಮೀರಿದ್ದು ಅನ್ನುವುದು ಬಹುಶಃ‌ ಇದಕ್ಕೇನೋ..!

See also  ಚೌಕಿದಾರ್ ರಾಷ್ಟ್ರೀಯತೆ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು