News Kannada
Saturday, December 03 2022

ದೇಶ-ವಿದೇಶ

ಒಂದೇ ದಿನ ಲಕ್ಷಕ್ಕೂ ಅಧಿಕ ಕೊರೋನ ಸೋಂಕು ಪ್ರಕರಣ ; ಮತ್ತೆ ಲಾಕ್‌ ಡೌನ್‌ ?

Photo Credit :

ಒಂದೇ ದಿನ ಲಕ್ಷಕ್ಕೂ ಅಧಿಕ ಕೊರೋನ ಸೋಂಕು ಪ್ರಕರಣ ; ಮತ್ತೆ ಲಾಕ್‌ ಡೌನ್‌ ?

ನವದೆಹಲಿ: ಮಹಾಮಾರಿ ಕರೊನಾ ಎರಡನೇ ಅಲೆ ಶುರುವಾದಾಗಿನಿಂದ ದೇಶದಲ್ಲಿ ದಿನೇದಿನೆ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಇಳಿಮುಖವಾಗುತ್ತಿದ್ದ ಕರೊನಾ ಪ್ರಕರಣಗಳು ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಏರುಗತಿಯಲ್ಲಿ ಸಾಗುತ್ತಿದ್ದು, ಮೊದಲ ಬಾರಿಗೆ ಮತ್ತೆ 1 ಲಕ್ಷ ಗಡಿ ದಾಟಿದೆ. ಸರ್ಕಾರದ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ ಒಟ್ಟು 1,03,558 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮೂಲಕ ದೇಶದ ಒಟ್ಟಾರೆ ಕೋವಿಡ್​ ಪ್ರಕರಣಗಳ ಸಂಖ್ಯೆ 1,25,89,067ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ ಅತ್ಯಂತ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ. ಒಟ್ಟು 29 ಲಕ್ಷ ಪ್ರಕರಣಗಳು ಇದುವರೆಗೂ ವರೆಯಾಗಿವೆ. ಭಾನುವಾರ ಸರ್ಕಾರದ ಡೇಟಾ ಪ್ರಕಾರ ಹೊಸದಾಗಿ 57,074 ಕೇಸ್​ಗಳು ವರದಿಯಾಗಿವೆ. ಅದರಲ್ಲೂ ಮುಂಬೈ ಒಂದರಲ್ಲೇ 11,163 ಪ್ರಕರಣಗಳು ಪಾಸಿಟಿವ್​ ಆಗಿವೆ. ಈ ಮೂಲಕ ಮುಂಬೈ ಒಂದರಲ್ಲೇ ಈವರೆಗೂ 4,52,445 ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ ದೇಶದಲ್ಲಿ 7,41,830 ಸಕ್ರೀಯ ಪ್ರಕರಣಗಳಿವೆ. 24 ಗಂಟೆಗಳಲ್ಲಿ 52,847 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, ಈವರೆಗೂ ಒಟ್ಟು 1,16,82,136 ಮಂದಿ ಗುಣಮುಖರಾಗಿದ್ದಾರೆ. 478 ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 1,65,101ಕ್ಕೆ ಏರಿಕೆಯಾಗಿದೆ. ಇದುವರೆಗೂ 7,91,05,163 ಮಂದಿಗೆ ಕರೊನಾ ಲಸಿಕೆ ನೀಡಲಾಗಿದೆ. ತ್ವರಿತ ಏರುಗತಿಯಲ್ಲಿರುವ ಕೊರೋನ ಪ್ರಕರಣಗಳ ತಡೆಗೆ ಸರ್ಕರ ಮತ್ತೆ ಲಾಕ್‌ ಡೌನ್‌ ಜಾರಿಗೊಳಿಸುವುದೇ ಕಾದು ನೋಡಬೇಕಿದೆ.

See also  ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಡಕ್ ಎಚ್ಚರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು