News Kannada
Friday, December 09 2022

ದೇಶ-ವಿದೇಶ

ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಇಟ್ಟುಕೊಂಡು ಮಲಗಿದ್ದ ಚುನಾವಣಾಧಿಕಾರಿಗಳ ಅಮಾನತ್ತು

Photo Credit :

  ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಇಟ್ಟುಕೊಂಡು ಮಲಗಿದ್ದ ಚುನಾವಣಾಧಿಕಾರಿಗಳ ಅಮಾನತ್ತು

ಕೋಲ್ಕತಾ : ಇಂದು ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ವಲಯ ಅಧಿಕಾರಿ ಎಸಗಿದ ತಪ್ಪಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಬಂಗಾಳದ ಚುನಾವಣಾಧಿಕಾರಿ ಮತಯಂತ್ರವನ್ನು ತನ್ನೊಂದಿಗೆ ಇರಿಸಿಕೊಂಡು ಟಿಎಂಸಿ ನಾಯಕನ ಮನೆಯಲ್ಲಿ ಇಡೀ ರಾತ್ರಿ ಮಲಗಿದ್ದ ಹಿನ್ನೆಲೆ, ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿದೆ.
ತೃಣಮೂಲ ಕಾಂಗ್ರೆಸ್​ ನಾಯಕನ ಮನೆಯಲ್ಲಿ ಇವಿಎಂ ದೊರೆತಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ ಉಲುಬೆರಿಯಾದಲ್ಲಿ ಟಿಎಂಸಿ ನಾಯಕನ ​ ಮನೆಯಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇವಿಎಂ ಹಾಗೂ ವಿವಿಪ್ಯಾಟ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಟಿಎಂಸಿ ನಾಯಕ​ ಗೌತಮ್​ ಘೋಷ್​​ ಚುನಾವಣಾಧಿಕಾರಿ ತಪನ್ ಸರ್ಕಾರ್​​​ಗೆ ಸಂಬಂಧಿಕನೆಂದು ತಿಳಿದು ಬಂದಿದೆ. ಒಟ್ಟಾರೆ ಚುನಾವಣಾಧಿಕಾರಿ ನಿಯಮ ಉಲ್ಲಂಘಿಸಿ ಮಾಡಿದ ತಪ್ಪಿಗೆ ಈಗ ಅಮಾನತುಗೊಂಡಿದ್ದಾರೆ. ಜೊತೆಗೆ ಮತದಾನಕ್ಕಾಗಿ ಕಾಯ್ದಿರಿಸಿದ್ದ ಇವಿಎಂ ಯಂತ್ರವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.ಈ ಕೃತ್ಯದಲ್ಲಿ ಭಾಗಿಯಾಗಿರುವ ಚುನಾವಣಾಧಿಕಾರಿ ಹಾಗೂ ಇನ್ನಿತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.
“ಇದು ಭಾರತದ ಚುನಾವಣಾ ಆಯೋಗದ ಸೂಚನೆಗಳ ಸಂಪೂರ್ಣ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ವಲಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಅಧಿಕಾರಿಗೆ ಒದಗಿಸಲಾಗಿದ್ದ ಸೆಕ್ಟರ್ ಪೊಲೀಸರನ್ನು ಸಹ ಅಮಾನತುಗೊಳಿಸುವಂತೆ ನಿರ್ದೇಶಿಸಲಾಗಿದೆ ” ಎಂದು ಚುನಾವಣಾ ಆಯೋಗ ತಿಳಿಸಿದೆ. ಅಮಾನತುಗೊಂಡ ವಲಯ ಅಧಿಕಾರಿ ಸರ್ಕಾರ್, ಮತದಾನಕ್ಕಾಗಿ ಕಾಯ್ದಿರಿಸಲಾಗಿದ್ದ 4 ಇವಿಎಂ ಯಂತ್ರಗಳನ್ನು ಟಿಎಂಸಿ ನಾಯಕ ಗೌತಮ್ ಘೋಷ್ ಅವರ ಮನೆಗೆ ತೆಗೆದುಕೊಂಡು ಹೋಗಿ, ಸೋಮವಾರ ಇಡೀ ರಾತ್ರಿ ಅಲ್ಲಿಯೇ ಮಲಗಿದ್ದರು. ಬಳಿಕ ಕೇಂದ್ರೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇವಿಎಂಗಳನ್ನು ವಶಪಡಿಸಿಕೊಂಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್​ ವರದಿ ಮಾಡಿದೆ. ಆದರೆ ವಲಯ ಅಧಿಕಾರಿ ಸರ್ಕಾರ್, ನಾನು ವಿಶ್ರಾಂತಿ ತೆಗೆದುಕೊಳ್ಳಲಷ್ಟೇ ಅವರ ಮನೆಗೆ ಹೋಗಿದ್ದೆ. ಇವಿಎಂಗಳನ್ನು ಕಾರಿನಲ್ಲೇ ಇರಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. 8 ಹಂತಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 31 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 205 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

See also  45ಯೋಧರನ್ನು ಬಲಿ ಪಡೆದ ಉಗ್ರ ರಶೀದ್ ಘಾಜಿಯನ್ನು ಸದೆಬಡಿದ ಸೇನೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು