News Kannada
Monday, December 05 2022

ದೇಶ-ವಿದೇಶ

ನೂರಕ್ಕೂ ಹೆಚ್ಚು ಸಾಕು ಹಂದಿಗಳ ಸಾವು, ಹಂದಿಜ್ವರದ ಆತಂಕ

Photo Credit :

ನೂರಕ್ಕೂ ಹೆಚ್ಚು ಸಾಕು ಹಂದಿಗಳ ಸಾವು, ಹಂದಿಜ್ವರದ ಆತಂಕ

ಗುವಾಹಟಿ: 100 ಕ್ಕೂ ಹೆಚ್ಚು ಸಾಕು ಹಂದಿಗಳು ಸಾವನ್ನಪ್ಪಿರವ ಘಟನೆ ಲುಂಗ್ಲ ಜಿಲ್ಲೆಯ ಲುಂಗ್ ಸೆನ್ ಗ್ರಾಮದಲ್ಲಿ ಕಂಡುಬಂದಿದೆ. ಆಫ್ರಿಕನ್ ಜ್ವರದಿಂದ ಈ ಸಾಕು ಹಂದಿಗಳು ಮೃತಪಟ್ಟಿವೆ ಎಂದು ಪ್ರಾಥಮಿಕ ಆರೋಗ್ಯ ವರದಿ ಸ್ಪಷ್ಟಪಡಿಸಿದೆ .

ಈ ಪ್ರದೇಶ ಮಯನ್ಮಾರ್‌’ನೊಂದಿಗೆ ಗಡಿ ಹಂಚಿಕೊಂಡಿದ್ದು, ಗ್ರಾಮಗಳಿಗೆ ಹಂದಿಗಳ ಆಮದು ಮತ್ತು ರಫ್ತು ನಿರ್ಬಂಧಿಸಲಾಗಿದೆ. ಅದರೊಂದಿಗೆ, ಪ್ರದೇಶದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶುವೈದ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೃತಪಟ್ಟ ಹಂದಿಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಭೋಪಾಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈಸೆಕ್ಯುರಿಟಿ ಪ್ರಾಣಿಗಳ ರೋಗ ಸಂಸ್ಥೆಗೆ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಮಿಜೋರಾಂ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ನಿರ್ದೇಶಕ ಡಾ . ಹಮಾರ್ಕ್ ಕುಂಗ ತಿಳಿಸಿದ್ದಾರೆ .

ಇದೇ ರೀತಿ, ಕಳೆದ ವರ್ಷ ಅಸ್ಸಾಂನಲ್ಲಿ ಸಾವಿರಾರು ದೇಶಿಯ ಹಂದಿಗಳು ಮೃತಪಟ್ಟಿದ್ದವು . ಆದರೆ ಈ ರೋಗ ಹಂದಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿದುಬಂದಿದೆ.

See also  ಮಂಗಗಳಿಗೆ ಆಹಾರ ನೀಡಿದ ಗ್ರಾಮಸ್ಥರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು