News Kannada
Thursday, December 08 2022

ದೇಶ-ವಿದೇಶ

ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಘರ್ಷಣೆ: CISF ಗುಂಡಿಗೆ ಐವರು ಬಲಿ

Photo Credit :

ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಘರ್ಷಣೆ: CISF ಗುಂಡಿಗೆ ಐವರು ಬಲಿ

ಕೋಲ್ಕತಾ ; ಪಶ್ಚಿಮ ಬಂಗಾಳದ ಕೂಚ್‌ ಬೆಹರ್‌ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ನಡೆದಿದ್ದು, ಗಲಭೆ ನಿಯಂತ್ರಿಸಲು CISF ಸಿಬ್ಬಂದಿಗಳು ಗುಂಡು ಹಾರಿಸಿದ್ದರಿಂದ ಕನಿಷ್ಟ ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಶನಿವಾರ ಬೆಳಗ್ಗೆ 9 ಗಂಟೆಗಳವರೆಗೆ ಘರ್ಷಣೆ ನಡೆದ ಪ್ರದೇಶದಲ್ಲಿ 15.85 % ಮತದಾನ ನಡೆದಿದೆ. CISF ಗುಂಡೇಟಿಗೆ ಮತದಾರನೊಬ್ಬ ಬಲಿಯಾಗಿದ್ದಾನೆ ಎಂದು ದಿ ಟ್ರಿಬ್ಯೂನ್‌ ವರದಿ ಮಾಡಿದೆ.
ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವಿನ ಗಲಭೆಯ ನಡುವೆ, ಬೂತ್‌ ನಂಬರ್‌ 85 ನಲ್ಲಿ, ಆನಂದ ಬರ್ಮನ್‌ ಎಂಬ 18 ವರ್ಷದ ಮತದಾರನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದಾರೆ. ದುಷ್ಕರ್ಮಿಗಳು ಇದುವರೆಗೂ ಯಾರೆಂದು ಪತ್ತೆ ಹಚ್ಚದಿದ್ದರೂ, ಮೃತಪಟ್ಟ ಆನಂದ್‌, ತಮ್ಮ ಕಾರ್ಯಕರ್ತನೆಂದು ಟಿಎಂಸಿ-ಬಿಜೆಪಿ ಎರಡೂ ಪಕ್ಷಗಳು ವಾದಿಸಿವೆ. ಅದಾಗ್ಯೂ, ಆನಂದ್‌ ಕುಟುಂಬಸ್ಥರು, ಆನಂದ್‌ ಬಿಜೆಪಿ ಕಾರ್ಯಕರ್ತನಾಗಿದ್ದ ಎಂದು ತಿಳಿಸಿದ್ದಾರೆ. ಗಲಭೆಗೆ ಬಿಜೆಪಿ ಕಾರಣವೆಂದು ಟಿಎಂಸಿ ಆರೋಪಿಸಿದ್ದು, ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದೆ. ಹಲವು ಮತಕೇಂದ್ರಗಳಲ್ಲಿ ಬಿಜೆಪಿಯು ಟಿಎಂಸಿ ಏಜೆಂಟರಿಗೆ ಪ್ರವೇಶ ನೀಡುತ್ತಿಲ್ಲ ಎಂದು ಹೇಳಿದೆ.
ಈ ನಡುವೆ, ಗಂಗೂಲಿ ಬಾಗನ್‌ ಪ್ರದೇಶದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಸುಜನ್‌ ಚಕ್ರಬರ್ತಿ ಅವರ ಬೂತ್‌ ಏಜೆಂಟ್‌ ಒವ್ವರಿಗೆ ಮತಗಟ್ಟೆಯಲ್ಲೇ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ತಪ್ಪಿಸಿ ಓಡುವಾಗ ಖಾರದ ಪುಡಿ ಮುಖಕ್ಕೆ ಎರಚಲಾಗಿದೆಯೆಂದು ವರದಿಯಾಗಿದೆ. ಬಳಿಕ, ಭದ್ರತಾ ಸಿಬ್ಬಂದಿಗಳ ಒಂದು ತುಕಡಿ ಮತಗಟ್ಟೆಗೆ ಧಾವಿಸಿ, ಬಿಗಿ ಬಂದೋಬಸ್ತ್‌ ಏರ್ಪಡಿಸಿದೆ.

See also  ಮುರುಡೇಶ್ವರ; ತಿಮಿಂಗಿಲದ ವಾಂತಿ ಪತ್ತೆ, ಇದರ ಬೆಲೆ ಕೋಟಿ ರೂ.!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು