News Kannada
Tuesday, December 06 2022

ದೇಶ-ವಿದೇಶ

ಬೆಡ್​ಶೀಟ್ ಮೇಲೆ ರಕ್ತದ ಕಲೆಯಿಲ್ಲವೆಂದು ವಿಚ್ಛೇದನದ ಜೊತೆಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟ ಗಂಡನ ಮನೆಯವರು!

Photo Credit :

ಬೆಡ್​ಶೀಟ್ ಮೇಲೆ ರಕ್ತದ ಕಲೆಯಿಲ್ಲವೆಂದು ವಿಚ್ಛೇದನದ ಜೊತೆಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟ ಗಂಡನ ಮನೆಯವರು!

ಕೊಲ್ಹಾಪುರ (ಮಹಾರಾಷ್ಟ್ರ): ವಿಜ್ಞಾನ ಎಷ್ಟೇ ಮುಂದುವರಿದರೂ ಹೆಣ್ಣು ಇಂದಿಗೂ ಅಮಾನವೀಯ ಪದ್ಧತಿಗಳಿಂದ ನಲುಗುತ್ತಲೇ ಇದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತಹ ದಾರುಣ ಘಟನೆ ಮಹಾರಾಷ್ಟ್ರದ ಕೊಲ್ಹಾಪುರಲ್ಲಿ ನಡೆದಿದೆ. ಗಂಡನ ಮನೆಯವರು ಒಡ್ಡಿದ ಕನ್ಯತ್ವ ಪರೀಕ್ಷೆಯಲ್ಲಿ ಸೊಸೆ ವಿಫಲವಾದಳು ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ. ಪ್ರಥಮ ರಾತ್ರಿಯಂದು ನೀಡಿದ್ದ ಬಿಳಿ ಬೆಡ್​ಶೀಟ್​ ಮೇಲೆ ರಕ್ತದ ಕಲೆ ಇಲ್ಲ. ಸೊಸೆ ಕನ್ಯತ್ವ ಪರೀಕ್ಷೆಯಲ್ಲಿ ಸೋತಿದ್ದಾಳೆ. ಹೀಗಾಗಿ ವಿಚ್ಛೇದನದ ಜೊತೆಗೆ ಪರಿಹಾರವಾಗಿ 10 ಲಕ್ಷ ರೂಪಾಯಿಯನ್ನು ಕೊಡಬೇಕು ಎಂದು ಗಂಡನ ಮನೆಯವರು ಯುವತಿ ಮನೆಯವರನ್ನು ಹಿಂಸಿಸಿರುವ ಪ್ರಕರಣ ಬಯಲಾಗಿದೆ.
ನವೆಂಬರ್ 27, 2020ರಲ್ಲಿ ಇಬ್ಬರು ಸೋದರಿಯರನ್ನು ಕೊಲ್ಹಾಪುರದ ಇಬ್ಬರು ಯುವಕರು ವರಿಸಿದ್ದರು. ಸಂಭ್ರಮದೊಂದಿಗೆ ಪತಿ ಮನೆಗೆ ಬಂದ ಇಬ್ಬರು ಸೋದರಿಯರಿಗೂ ಶಾಕ್ ಕಾದಿತ್ತು. ಈ ಭಾಗದಲ್ಲಿ ಅನೇಕ ದಶಕಗಳಿಂದ ಜಾರಿಯಲ್ಲಿರುವ ಕನ್ಯತ್ವ ಪರೀಕ್ಷೆಗೆ ಇಬ್ಬರೂ ನವವಿವಾಹಿತೆಯರು ಒಳಗಾಗಬೇಕಿತ್ತು. ಗಂಡನ ಮನೆಯವರು ಮೊದಲ ರಾತ್ರಿಯಂದು ಶ್ವೇತ ಬಣ್ಣದ ಬೆಡ್​ಶೀಟ್​ ನೀಡಿದ್ದಾರೆ. ಬೆಳಗ್ಗೆ ಈ ಬೆಡ್​ಶೀಟ್ ಮೇಲೆ ರಕ್ತದ ಕಲೆ ಇದ್ದರೆ ಮಾತ್ರ ವಧು ಕನ್ಯೆಯಾಗಿದ್ದಾಳೆ ಎಂದು ಸಾಬೀತಾಗುತ್ತದೆ ಅನ್ನೋದು ಗಂಡನ ಮನೆಯವರ ಷರತ್ತು. ಈ ಅನಿಷ್ಟ ಪದ್ಧತಿಗೆ ಇಬ್ಬರು ಸೋದರಿಯರನ್ನು ಒತ್ತಾಯ ಪೂರ್ವಕವಾಗಿ ಒಳಪಡಿಸಲಾಗಿದೆ. ಒಬ್ಬ ಸೋದರಿ ಬೆಡ್​ಶೀಟ್ ಮೇಲೆ ರಕ್ತದ ಕಲೆ ತೋರಿಸಿದ್ದರೆ, ಮತ್ತೊಬ್ಬ ಸೋದರಿಯ ಬೆಡ್​ಶೀಟ್ ಮೇಲೆ ಕಲೆಗಳಿರಲಿಲ್ಲ. ಇದಕ್ಕೆ ತಕರಾರು ತೆಗೆದ ಅತ್ತೆ, ಸೊಸೆ ಕನ್ಯೆಯಾಗಿ ಉಳಿದಿಲ್ಲ. ಮದುವೆಗೂ ಮುನ್ನ ಯಾರೊಂದಿಗೋ ದೈಹಿಕ ಸಂಪರ್ಕ ಹೊಂದಿದ್ದಾಳೆ ಎಂದು ಆರೋಪಿಸಿದ್ದಾರೆ. ಇಬ್ಬರು ಸೋದರಿಯಾದ್ದರಿಂದ ಇಬ್ಬರೂ ತಮಗೆ ಬೇಡ ಎಂದು ಪತಿ ಮಹಾಷಯರು ಕೊಠೋರವಾಗಿ ನಡೆದುಕೊಂಡಿದ್ದಾರೆ. ನಿಂದಿಸಿ, ಹಲ್ಲೆ ನಡೆಸಿ ಇಬ್ಬರೂ ಯುವತಿಯರನ್ನು ತವರು ಮನೆಗೆ ಕಳುಹಿಸಿದ್ದಾರೆ.
ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾದ ಯುವತಿಯರ ಕುಟುಂಬ ತಮ್ಮ ಜಾತಿಯ ಪಂಚಾಯತ್ ಮೊರೆ ಹೋಗಿದ್ದಾರೆ. ತಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ಯುವತಿಯರ ತಾಯಿ ಅಂಗಲಾಚಿದ್ದಾರೆ. ಸಹಾಯ ಮಾಡುವುದಾಗಿ ಪಂಚಾಯತ್ ಸದಸ್ಯರು 40 ಸಾವಿರ ರೂಪಾಯಿಯನ್ನು ಯುವತಿಯರ ತಾಯಿಯಿಂದ ಪಡೆದುಕೊಂಡಿದ್ದಾರೆ. ದೇವಸ್ಥಾನ ಒಂದರಲ್ಲಿ ಎಲ್ಲರನ್ನೂ ಸೇರಿಸಿ ನ್ಯಾಯ -ಪಂಚಾಯಿತಿ ನಡೆಸಿದ ಸದಸ್ಯರು ಇಬ್ಬರು ಯುವತಿಯರಿಗೆ ವಿಚ್ಛೇದನವನ್ನೇ ಕೊಡಿಸಿದ್ದಾರೆ. ಸಾಲದಕ್ಕೆ ಯುವತಿಯರನ್ನು ಜಾತಿಯಿಂದ ಬಹಿಷ್ಕರಿಸಿದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿದ್ದ ಯುವತಿಯರ ಮನೆಯವರಿಗೆ ಗಾಯದ ಮೇಲೆ ಬರೆ ಎಳೆದಂದಾಗಿದೆ. ಸಾಲದಕ್ಕೆ ಇದೇ ವೇಳೆ ಗಂಡನ ಮನೆಯವರು ಪರಿಹಾರವಾಗಿ ಮನೆ ಕಟ್ಟಿಕೊಳ್ಳಲು 10 ಲಕ್ಷ ರೂಪಾಯಿ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

See also  ಬೈಕ್ ಸಮೇತ ಬಾವಿಗೆ ಬಿದ್ದ ಸವಾರ: 2ದಿನಗಳ ಬಳಿಕ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು