News Kannada
Tuesday, December 06 2022

ದೇಶ-ವಿದೇಶ

ಎನ್‌ಐಎ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧನ

Photo Credit :

ಎನ್‌ಐಎ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧನ

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧಿಸಿದೆ. ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಅವರಿಗೆ ರಿಯಾಜ್‌ ಸಹಕಾರ ನೀಡಿದ್ದರು ಎಂದು ಎನ್‌ಐಎ ಹೇಳಿದೆ. ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣ ಮತ್ತು ಉದ್ಯಮಿ ಮನ್‌ಸುಖ್‌ ಹಿರೇನ್ ಸಾವಿನ ಪ್ರಕರಣದಲ್ಲಿ ಎನ್‌ಐಎ ಕಳೆದ ತಿಂಗಳು ಸಚಿನ್ ವಾಜೆ ಅವರನ್ನು ಬಂಧಿಸಿದೆ.
ಸಚಿನ್‌ ವಾಜೆ ರೀತಿಯೇ ರಿಯಾಜ್‌ ಸಹ ಅಸಿಸ್ಟೆಂಟ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಮಾರ್ಚ್‌ 5ರಂದು ಶವವಾಗಿ ಪತ್ತೆಯಾದ ಉದ್ಯಮಿ ಹಿರೇನ್‌ ಅವರ ಸ್ಕಾರ್ಪಿಯೊ ಕಾರನ್ನು ಸಚಿನ್‌ ವಾಜೆ ಬಾಂಬ್‌ ಬೆದರಿಕೆಗಾಗಿ ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಸ್ಫೋಟಕಗಳಿದ್ದ ಕಾರು ಫೆಬ್ರುವರಿ 25ರಂದು ಮುಕೇಶ್‌ ಅಂಬಾನಿ ನಿವಾಸ ಆಂಟಿಲಿಯಾ ಮುಂಭಾಗದಲ್ಲಿ ಪತ್ತೆಯಾಗಿತ್ತು. ಆ ಪ್ರಕರಣಗಳಲ್ಲಿ ಸಚಿನ್‌ರನ್ನು ಮಾರ್ಚ್‌ 13ರಂದು ಎನ್‌ಐಎ ಬಂಧಿಸಿತ್ತು.ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಕಳೆದ ತಿಂಗಳು ಎರಡೂ ಪ್ರಕರಣಗಳನ್ನು ಎನ್‌ಐಎ ಮಹಾರಾಷ್ಟ್ರದ ಉಗ್ರ ನಿಗ್ರಹ ತಂಡದಿಂದ ತನಿಖೆಗೆ ಹಸ್ತಾಂತರಿಸಿಕೊಂಡಿದೆ. ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌, ಇಬ್ಬರು ಡೆಪ್ಯೂಟಿ ಕಮಿಷನರ್‌ಗಳು ಹಾಗೂ ಅಪರಾಧ ಗುಪ್ತಚರ ದಳ ಹತ್ತಾರು ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಹಿರೇನ್ ಸಾವಿನ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಚಿನ್‌ ವಾಜೆ 2004ರಿಂದ 2007ರ ವರೆಗೂ ಅಮಾನತ್ತುಗೊಂಡಿದ್ದರು. ಅವರು 2007ರಲ್ಲಿ ಪೊಲೀಸ್‌ ಇಲಾಖೆ ತೊರೆದಿದ್ದರು. 2020ರಲ್ಲಿ ಅವರನ್ನು ಮತ್ತೆ ಪೊಲೀಸ್‌ ಇಲಾಖೆಗೆ ಸೇರಿಸಿಕೊಳ್ಳಲಾಗಿತ್ತು.

See also  ಕೊರೋನ ಎರಡನೇ ಅಲೆಗೆ ತುತ್ತಾಗುತ್ತಿರುವ ಪುಟ್ಟ ಕಂದಮ್ಮಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು