News Kannada
Friday, December 02 2022

ದೇಶ-ವಿದೇಶ

ಜುಕರ್​ಬರ್ಗ್ ಭದ್ರತೆಗಾಗಿಯೇ ಫೇಸ್​ಬುಕ್​ನಿಂದ ದಿನಕ್ಕೆ 46 ಲಕ್ಷ; ವರ್ಷಕ್ಕೆ 171 ಕೋಟಿ ಖರ್ಚು

Photo Credit :

ಜುಕರ್​ಬರ್ಗ್ ಭದ್ರತೆಗಾಗಿಯೇ ಫೇಸ್​ಬುಕ್​ನಿಂದ ದಿನಕ್ಕೆ 46 ಲಕ್ಷ; ವರ್ಷಕ್ಕೆ 171 ಕೋಟಿ ಖರ್ಚು

ಫೇಸ್​ಬುಕ್​ನ ಸಹಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಅವರ ಭದ್ರತೆಗಾಗಿ ಫೇಸ್​ಬುಕ್ ಪ್ರತಿದಿನ ಬರೋಬ್ಬರಿ 46 ಲಕ್ಷ ಹಣವನ್ನ ಖರ್ಚು ಮಾಡುತ್ತಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ. ಏಪ್ರಿಲ್ 11 ರಂದು ಫೇಸ್​ಬುಲ್ 2020 ರಲ್ಲಿ ಜುಕರ್​ಬರ್ಗ್ ಅವರ ಭದ್ರತೆಗಾಗಿಯೇ ಒಟ್ಟು 171 ಕೋಟಿ ರೂಗಳನ್ನ ವ್ಯಯಿಸಿರೋದಾಗಿ ಹೇಳಿದೆ.

ಯುಎಸ್​ ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್ ಕಮಿಷನ್​ ಜೊತೆಗೆ ಫೇಸ್​ಬುಕ್ ನಡೆಸಿದ ವಾರ್ಷಿಕ ವಿಮರ್ಶಾ ಭೇಟಿಯಲ್ಲಿ ಈ ವಿಚಾರವನ್ನು ಫೇಸ್​ಬುಕ್ ಬಹಿರಂಗಗೊಳಿಸಿದೆ ಎನ್ನಲಾಗಿದೆ. ಈ ಹಿಂದಿಗಿಂತಲೂ 2020 ರಲ್ಲಿ ಜುಕರ್​ಬರ್ಗ್ ಅವರ ಭದ್ರತೆಗಾಗಿ ಹೆಚ್ಚಿನ ಭದ್ರತಾ ವೆಚ್ಚವನ್ನು ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಜುಕರ್ ಬರ್ಗ್ ಅವರಿಗೆ ಬೆದರಿಕೆ ಇದ್ದು ಅವರ ನಿವಾಸ, ಅವರ ಕುಟುಂಬದ ಪ್ರಯಾಣದ ಖರ್ಚು ಸೇರಿ ಒಟ್ಟು 171 ಕೋಟಿ ವೆಚ್ಚವಾಗಿದೆ ಎಂದು ಫೇಸ್​ಬುಕ್ ಹೇಳಿದೆ. 

ಮತ್ತೊಂದು ಅಚ್ಚರಿಯ ವಿಚಾರವೆಂದರೆ ಜುಕರ್​ಬರ್ಗ್ ತಾವೇ ಹುಟ್ಟುಹಾಕಿದ ಸಂಸ್ಥೆಯಿಂದ ವಾರ್ಷಿಕವಾಗಿ ಕೇವಲ 1 ಡಾಲರ್​ ಸಂಬಳವನ್ನಷ್ಟೇ ಪಡೆಯುತ್ತಿದ್ದಾರೆ. ಇದರ ಹೊರತಾಗಿ ಬೋನಸ್​ನ್ನೂ ಕೂಡ ಅವರು ಪಡೆಯುತ್ತಿಲ್ಲ ಎಂದು ಫೇಸ್​ಬುಕ್ ಹೇಳಿಕೊಂಡಿದೆ.

See also  ಆಕ್ಸಿಜನ್ ಕೊರತೆಯಿಂದ ಮೂರು ಶಿಶುಗಳು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು