News Kannada
Saturday, December 03 2022

ದೇಶ-ವಿದೇಶ

ಮಹಿಳೆಯೊಬ್ಬಳ ಮೇಲೆ 11 ದಿನಗಳ ಕಾಲ ನಿರಂತರವಾಗಿ 23 ಯೋಧರಿಂದ ಅತ್ಯಾಚಾರ

Photo Credit :

ಮಹಿಳೆಯೊಬ್ಬಳ ಮೇಲೆ 11 ದಿನಗಳ ಕಾಲ ನಿರಂತರವಾಗಿ 23 ಯೋಧರಿಂದ ಅತ್ಯಾಚಾರ

ಇಥಿಯೋಪಿಯ: ಇಥಿಯೋಪಿಯಾದ ಟೈಗ್ರೇ ವಲಯದ 27 ವರ್ಷದ ಮಹಿಳೆಯೊಬ್ಬಳ ಮೇಲೆ 11 ದಿನಗಳ ಕಾಲ ನಿರಂತರವಾಗಿ 23 ಯೋಧರು ಅತ್ಯಾಚಾರ ಎಸಗಿರುವ ಕರಾಳ ಘಟನೆ ಬೆಳಕಿಗೆ ಬಂದಿದೆ.

 

ಸಂತ್ರಸ್ತ ಮಹಿಳೆಯನ್ನು ಯೋಧರು ನಿರಂತರವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಜನನಾಂಗಕ್ಕೆ ಮೊಳೆ, ಕಲ್ಲು ಮತ್ತು ಇತರೆ ವಸ್ತುಗಳನ್ನು ತುರುಕಿ ವಿಕೃತಿ ಮೆರೆದಿದ್ದಾರೆ. ಇಷ್ಟೇ ಅಲ್ಲದೆ, ಚಾಕು ತೋರಿಸಿ ಎಲ್ಲಿಯು ಬಾಯಿಬಿಡದಂತೆ ಹೆದರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

 

ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಮನೆಗೆ ಹೋಗುವಾಗ ಸಮವಸ್ತ್ರದಲ್ಲಿ ಯೋಧರು ಮೆಕೆಲ್ಲೆಯಿಂದ ಅಡಿಗ್ರಾತ್​ ನಗರಕ್ಕೆ ತೆರಳುತ್ತಿದ್ದ ಮಿನಿಬಸ್​ ಅನ್ನು ನಿಲ್ಲಿಸಿ ಆಕೆಯನ್ನು ಬಸ್​ನಿಂದ ಕೆಳಕ್ಕೆ ಇಳಿಯುವಂತೆ ಆದೇಶಿಸಿದ್ದಾರೆ. ನಂತರ ಯೋಧರು ತಮ್ಮ ಶಿಬಿರದಲ್ಲಿ ಆಕೆಯನ್ನು 11 ದಿನಗಳ ಕಾಲ ಬಂಧಿಯಾಗಿಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಕ್ರೂರ ಮೃಗಗಳಿಗಿಂತಲೂ ಅಮಾನವೀಯವಾಗಿ ವರ್ತಿಸಿದ್ದಾರೆ.

 

 

See also  ಬಿಜೆಪಿಯ ಎಂಟು ಮಂದಿ ಸಹಿತ ಉ.ಪ್ರದೇಶದಿಂದ 10 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು