News Kannada
Tuesday, November 29 2022

ದೇಶ-ವಿದೇಶ

ವಡೋದರಾದಲ್ಲಿ ಕೋವಿಡ್-19 ಕೇರ್‌ ಸೆಂಟರ್‌ ಆಗಿ ಬದಲಾದ ಮಸೀದಿ - 1 min read

Photo Credit :

ವಡೋದರಾದಲ್ಲಿ ಕೋವಿಡ್-19 ಕೇರ್‌ ಸೆಂಟರ್‌ ಆಗಿ ಬದಲಾದ ಮಸೀದಿ

ಗುಜರಾತ್​ : ದಿನೇ ದಿನೇ ಕೊರೋನಾ ಸೋಂಕಿತರ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿತ ರೋಗಿಗಳಿಂದ ಆಸ್ಪತ್ರೆಗಳು ತುಂಬಿವೆ. ರೋಗಿಗಳಿಗೆ ಸರಿಯಾಗಿ ಹಾಸಿಗೆ, ಆಮ್ಲಜನಕ ಮತ್ತು ಔಷದಿಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗುಜರಾತಿನ ವಡೋದರಾದಲ್ಲಿ ಮಸೀದಿಯನ್ನು 50 ಹಾಸಿಗೆಗಳ ಕೋವಿಡ್ ಸೌಲಭ್ಯವಾಗಿ ಪರಿವರ್ತಿಸಲಾಗಿದೆ. “ಆಮ್ಲಜನಕ ಮತ್ತು ಆಸ್ಪತ್ರೆಯ ಹಾಸಿಗೆಗಳ ಕೊರತೆಯಿಂದಾಗಿ, ನಾವು ಮಸೀದಿಯನ್ನು ಕೋವಿಡ್ -19 ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ ಮತ್ತು ಅದನ್ನು ಮಾಡಲು ರಂಜಾನ್ ತಿಂಗಳಿಗಿಂತ ಉತ್ತಮವಾದದ್ದು ಯಾವುದು” ಎಂದು ಮಸೀದಿಯ ಟ್ರಸ್ಟಿಗಳಲ್ಲಿ ಒಬ್ಬರಾದ ಇರ್ಫಾನ್ ಶೇಖ್ ಅವರು ಎಎನ್‌ಐ ಗೆ ಹೇಳಿದ್ದಾರೆ.
ಗುಜರಾತ್ ನಲ್ಲಿರುವ ಸಿವಿಲ್ ಆಸ್ಪತ್ರೆಗಳು ಕೊರೋನಾ ರೋಗಿಗಳನ್ನು ದಾಖಲಿಸುವ ಮೊದಲು ಸರಿಯಾದ ಕಾರ್ಯವಿಧಾನ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ರಾಜ್ಯ ಸರ್ಕಾರವು ಕಟ್ಟು ನಿಟ್ಟಾಗಿ ಆದೇಶಿಸಿದ್ದರೂ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಅಭಾವ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯಿತು. ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಸಿವಿಲ್ ಆಸ್ಪತ್ರೆಯ ಹೊರಗೆ ಆ್ಯಂಬುಲೆನ್ಸ್‌ಗಳು ದೀರ್ಘ ಸರತಿ ಸಾಲಿನಲ್ಲಿ ನಿಂತಿವೆ ಎಂದು ವರದಿಗಳು ಹೊರಬಿದ್ದ ಸಮಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ.ಈ ತೊಂದರೆಯನ್ನು ಮನಗಂಡ ವಡೋದರಾ ಮಸೀದಿಯ ಮುಸ್ಲಿಂ ಮುಖಂಡರು 50 ಹಾಸಿಗೆಯುಳ್ಳ ಕೋವಿಡ್ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿದ್ದಾರೆ. ಸದ್ಯ ಕೊರೋನಾ ರೋಗಿಗಳು ಮಸೀದಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ರೋಗಿಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ.
ಗುಜರಾತ್‌ನಲ್ಲಿ ಕಳೆದ ಸೋಮವಾರದಂದು ಒಂದೇ ದಿನದಲ್ಲಿ 11,000 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ರಾಜ್ಯವು ಸೋಮವಾರ 11,403 ಕೊರೋನಾ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 117 ಕೊರೋನಾ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದು ಈವರೆಗಿನ ಒಂದೇ ದಿನದಲ್ಲಿ ಅತೀ ಹೆಚ್ಚು ಸಾವಿನ ಪ್ರಕರಣವಾಗಿದೆ. ಪ್ರಸ್ತುತ ಗುಜರಾತ್ ರಾಜ್ಯದಲ್ಲಿ 68,754 ಕೊರೋನಾ ಸಕ್ರಿಯ ಪ್ರಕರಣಗಳಿವೆ.
ಈಗಾಗಲೇ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಕೊರೋನಾದಿಂದ ತತ್ತರಿಸಿವೆ. ಆರ್ಥಿಕವಾಗಿಯೂ ದೊಡ್ಡ ಪೆಟ್ಟು ನೀಡಿರುವ ಕೊರೋನಾವು ದೇಶದಲ್ಲಿ ಹಾನಿಯನ್ನುಂಟುಮಾಡುತ್ತಿದೆ. ಕೊರೋನಾ ನಿಯಂತ್ರಿಸಲು ದೇಶದ ಪ್ರತಿಯೊಬ್ಬ ಪ್ರಜೆಯ ಜವಬ್ದಾರಿಯಾಗಿದೆ. ಕೊರೋನಾ ಸಾಂಕ್ರಾಮಿಕ ರೋಗವಾದ್ದರಿಂದ ದೇಶದ ಜನರು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಾವು ವಾಸಿಸುವ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕಾಗಿದೆ.
ಕೊರೋನಾವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇಲ್ಲಿ ಕೇವಲ ಸರ್ಕಾರ, ವೈದ್ಯರಿಂದ ಸಂಪೂರ್ಣವಾಗಿ ನಿರ್ನಾಮ ಮಾಡಲು ಕಷ್ಟ ಸಾಧ್ಯ. ಪ್ರತಿಯೊಬ್ಬ ಭಾರತದ ಪ್ರಜೆ ಕೊರೋನಾ ವಿರುದ್ಧ ಹೋರಾಡಬೇಕಾಗಿದೆ. ವಡೋದರಾ ಮಸೀದಿಯಂತೆಯೇ ಇನ್ನೂ ಹಲವಾರು ಧಾರ್ಮಿಕ ಕೇಂದ್ರಗಳು ಹಾಗೂ ಸಂಘ ಸಂಸ್ಥೆಗಳು ಈಗಾಗಲೇ ಕೊರೋನಾ ರೋಗಿಗಳಿಗೆ ಅಗತ್ಯ ಸೇವೆಗಳನ್ನು ನೀಡುತ್ತಿರುವುದು ಪ್ರಶಂಸನೀಯ.

See also  ಭಾರತದಲ್ಲಿ 63,371 ಕೋವಿಡ್‌ ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು