News Kannada
Friday, December 02 2022

ದೇಶ-ವಿದೇಶ

ತೆಲಂಗಾಣದಲ್ಲಿ ಮೇ 1ರವರೆಗೆ ರಾತ್ರಿ ಕರ್ಫ್ಯೂ ಜಾರಿ

Photo Credit :

ತೆಲಂಗಾಣದಲ್ಲಿ ಮೇ 1ರವರೆಗೆ ರಾತ್ರಿ ಕರ್ಫ್ಯೂ ಜಾರಿ

ಹೈದರಾಬಾದ್‌: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವು, ರಾಜ್ಯದಾದ್ಯಂತ ಮೇ 1ರವರೆಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಿದೆ.

ಎಲ್ಲ ಕಚೇರಿಗಳು, ಸಂಸ್ಥೆಗಳು, ಮಳಿಗೆಗಳು, ವಾಣಿಜ್ಯ ವಹಿವಾಟುಗಳು, ರೆಸ್ಟೋರೆಂಟ್‌ಗಳು ರಾತ್ರಿ 8ಕ್ಕೆ ಮುಚ್ಚಲಿವೆ. ರಾತ್ರಿ ಕರ್ಫ್ಯೂ 9 ರಿಂದ ಬೆಳಿಗ್ಗೆ 5ಗಂಟೆವರೆಗೂ ಜಾರಿಯಲ್ಲಿರಲಿದೆ.

ಆಸ್ಪತ್ರೆಗಳು, ಡಯಾಗ್ನೊಸ್ಟಿಕ್‌ ಸಂಸ್ಥೆಗಳು, ಔಷಧ ಮಳಿಗೆಗಳು, ಮಾಧ್ಯಮ, ಐ.ಟಿ., ಇ-ಕಾಮರ್ಸ್‌ ಸೇವೆ, ಪೆಟ್ರೋಲ್‌ ಪಂಪ್‌ಗಳು, ಎಲ್‌ಪಿಜಿ, ಸಿಎನ್‌ಜಿ ಮತ್ತು ಅನಿಲ ಮಳಿಗೆಗಳಿಗೆ ಕರ್ಫ್ಯೂವಿನಿಂದ ವಿನಾಯಿತಿ ಇದೆ.

ತೆಲಂಗಾಣದಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿವೆ. 5,926 ಹೊಸ ಪ್ರಕರಣಗಳು ಸೋಮವಾರ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 42,853ಕ್ಕೆ ಏರಿದೆ.

See also  ಕಾರು- ಟ್ರಕ್‌ ಮುಖಾಮುಖಿ: 10 ಮಂದಿಯ ದಾರುಣ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು