News Kannada
Saturday, November 26 2022

ದೇಶ-ವಿದೇಶ

ಆನ್ಲೈನ್ ಬೆಟ್ಟಿಂಗ್ ಗಾಗಿ ಕೆಲಸ ಮಾಡುತ್ತಿದ್ದ ಕಂಪನಿಗೆ 1.92 ಕೋಟಿ ವಂದಿಸಿದ ವ್ಯಕ್ತಿ ಬಂಧನ - 1 min read

Photo Credit :

ಆನ್ಲೈನ್ ಬೆಟ್ಟಿಂಗ್ ಗಾಗಿ ಕೆಲಸ ಮಾಡುತ್ತಿದ್ದ ಕಂಪನಿಗೆ 1.92 ಕೋಟಿ ವಂದಿಸಿದ ವ್ಯಕ್ತಿ ಬಂಧನ

ಬೆಂಗಳೂರು: ವೈಯಕ್ತಿಕ ಅಮಿಷಗಳಿಗಾಗಿ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಉದ್ಯೋಗಿಯೋರ್ವ ಬರೊಬ್ಬರಿ 1.92 ಕೋಟಿ ರೂ. ಹಣವನ್ನು ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ಮಂಗಳೂರು ಮೂಲದ ವಿವೇಕ್ ಸಿಕ್ಕೀರಿಯಾ (33 ವರ್ಷ) ಎಂಬಾತ ಬೆಂಗಳೂರಿನ ಕೋರಮಂಗಲದ ಫಿನ್ ಟೆಕ್ ಕ್ಯಾಷ್ ಫ್ರೀ ಪ್ರೈ.ಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಗ್ರಾಹಕರ ಖಾತೆಗೆ ವರ್ಗಾಯಿಸಬೇಕಾಗಿದ್ದ ಸುಮಾರು 1.92 ಕೋಟಿ ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಸಂಸ್ಥೆಯ ಆಂತರಿಕ ತನಿಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈತನ ವಿರುದ್ಧ ಕಂಪನಿ ನಿರ್ದೇಶಕ ಶಿಶಿರ ಶಾಂಡಿಲ್ ಎಂಬುವವರು ಪೊಲೀಸ್ ದೂರು ನೀಡಿದ್ದಾರೆ. 

 

ಆತನ ಮೇಲೆ ಸಂಸ್ಥೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.

 

ಈಬಗ್ಗೆ ಆಂತರಿಕ ವಿಚಾರಣೆ ನಡೆಸಿದಾಗ ಹಂತಹಂತವಾಗಿ ಹಣವನ್ನು ಕದ್ದು ಅನ್ ಲೈನ್ ಬೆಟ್ಟಿಂಗ್ ನಲ್ಲಿ ತೊಡಗಿಸಿ ನಷ್ಟ ಉಂಟಾಗಿದೆ ಎಂದು ವಿವೇಕ್ ತಪ್ಪೊಪ್ಪಿಕೊಂಡಿದ್ದ. ಕಂದ ಹಣ ದುರುಪಯೋಗ ಪಡಿಸಿಕೊಂಡ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ಇಳಿಸಿದ್ದಾರೆ.

 

2019ರ ಜೂನ್ 24ರಲ್ಲಿ ಫಿನ್ ಟೆಕ್ ಕ್ಯಾಷ್ ಫ್ರೀ ಪ್ರೈ.ಲಿ.ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ವಿವೇಕ್ ಗೆ ಹಣಕಾಸಿನ ವಿಭಾಗದ ಜವಾಬ್ದಾರಿ ನೀಡಲಾಗಿತ್ತು. ಇದರ ನಡುವೆ 2020ರ ಜೂನ್ ನಿಂದ 2021ರ ಏಪ್ರಿಲ್ ಅವಧಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

See also  ಅಣೆಕಟ್ಟೆಯನ್ನೇ ಸ್ಫೋಟಿಸಿ ನೀರು ಹೊರಬಿಟ್ಟ ಚೀನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು