ಕರ್ನೂಲ್ : ಒಂದೆಡೆ ದೇಶದಲ್ಲಿ ಕಾರೋನಾ ಅಬ್ಬರ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಮಾನವೀಯತೆಯನ್ನು ಮರೆತು ಮನುಷ್ಯರು ವರ್ತಿಸುತ್ತಿರುವುದನ್ನು ಕಂಡು ಭಯ ಬೀಳುವಂತಾಗಿದೆ. ಹೌದು, ಆಂಧ್ರಪ್ರದೇಶದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಬಳಿಕ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕರ್ನೂಲ್ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದ್ದು, ಕೂಲಿ ಕೆಲಸಕ್ಕೆ ತಂದೆ ಜತೆ ಬಂದಿದ್ದ ಯುವತಿ ಈ ರೀತಿ ಕಾಮುಕರ ದೌರ್ಜನ್ಯಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾಳೆ . ಆಂಧ್ರಪ್ರದೇಶದ ನಾರಾಯಣ್ ಪೇಟ್ ನಿವಾಸಿಯಾಗಿರುವ ತಂದೆ ಕೂಲಿ ಕೆಲಸಕ್ಕೆ ಕರ್ನೂಲ್ ಗೆ ಬಂದಿದ್ದರು . ಜತೆಗೆ ತಮ್ಮ ಮಗಳನ್ನು ಕೂಡ ಕರೆದುಕೊಂಡು ಬಂದಿದ್ದರು ಎಂದು ವರದಿಯಾಗಿದೆ .
ಕರ್ನೂಲ್ ಜಿಲ್ಲೆಯ ಯಾಗಂಟಿಪಲ್ಲಿ ಎಂಬಲ್ಲಿ ಈ ಹೀನ ಕೃತ್ಯ ನಡೆದಿದೆ . ತೆಲಂಗಾಣದ ಯುವಕನೊಬ್ಬನ ಮೇಲೆ ಯುವತಿಯ ತಂದೆ ಸಂಶಯ ವ್ಯಕ್ತಪಡಿಸಿದ್ದಾರೆ . ತಂದೆಯ ಜತೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಯುವತಿಯನ್ನು ಗಮನಿಸಿದ್ದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಈ ಕೃತ್ಯ ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ .