ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವಾರು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ್ದು ನೈಟ್ ಕರ್ಫ್ಯೂ ಹಾಗೂ ವಾರಂತ್ಯದಲ್ಲಿ ಶನಿವಾರ ಹಾಗೂ ಭಾನುವಾರದಂದು ಸಂಪೂರ್ಣ ಕರ್ಫ್ಯೂ ಹಾಕಿದೆ. ಈ ನಿಟ್ಟಿನಲ್ಲಿ ಮೆಟ್ರೋ ಸರಕಾರದೊಂದಿಗೆ ಕೈಜೋಡಿಸಿದ್ದು, ಶನಿವಾರ ಹಾಗೂ ಭಾನುವಾರ ಮೆಟ್ರೋ ಸೇವೆಯನ್ನು ರದ್ದುಗೊಳಿಸಿದೆ.
ಈ ಕುರಿತು ವಿವರಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಬೆಂಗಳೂರು ನಗರದಲ್ಲಿ ಕರ್ಪ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೋ ರೈಲು ಕಾರ್ಯಾಚರಣೆಯ ವೇಳಾಪಟ್ಟಿಯನ್ನು ದಿನಾಂಕ04-05-2021ರವರೆಗೆ ಪರಿಷ್ಕರಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗಿನ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7.30ವರೆಗೆ ನಮ್ಮ ಮೆಟ್ರೋ ಸಂಚಾರಿಸಲಿದೆ. ಆದ್ರೇ ವೀಕ್ ಎಂಡ್ ಕರ್ಪ್ಯೂನಿಂದಾಗಿ ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲು ಸೇವೆಯನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದೆ.
ನಮ್ಮ ಮೆಟ್ರೋ ಸಂಚಾರದ ಪರಿಷ್ಕೃತ ವೇಳಾಪಟ್ಟಿ
* ಸೋಮವಾರದಿಂದ ಶುಕ್ರವಾರದವರೆಗಿನ ಎಲ್ಲಾ ವಾರದ ದಿನಗಳಲ್ಲಿ – ಮೆಟ್ರೋ ಲೈರು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.
* ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಸಂಜೆ 7.30ಕ್ಕೆ ಹೊರಡಲಿದೆ. ಕೊನೆಯ ವಾಣಿಜ್ಯ ಸೇವೆಯು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಇತರೆ ನಾಲ್ಕು ಮಾರ್ಗಗಳಿಗೆ ಸಂಪರ್ಕ ವಿರುತ್ತದೆ.
* ಶವಿನಾವರ ಮತ್ತು ಭಾನುವಾರದಂದು ವಾರಾಂತ್ಯದ ಕರ್ಪ್ಯೂ ದೃಷ್ಠಿಯಿಂದ ಮೆಟ್ರೋ ರೈಲು ಸೇವೆಗಳನ್ನು ಸದರಿ ಎರಡು ದಿನಗಳಂದು ಇಡೀ ದಿನ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ.
* ಸಾಮಾಜಿಕ ಅಂತರವನ್ನು ಕಾಪಾಡುವುದು, ಮುಖವಾಡ ಧರಿಸುವುದು, ಕೈ ನೈರ್ಮಲ್ಯತೆ, ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಗದಿಪಡಿಸಿದ ಕೋವಿಡ್-19 ಪ್ರೋಟೋಕಾಲ್ ಗಳ ಪ್ರಕಾರ ನಿರ್ವಹಿಸಲು ಸಾರ್ವಜನಿಕರನ್ನು ಕೋರಿದೆ.