News Kannada
Friday, October 07 2022

ದೇಶ-ವಿದೇಶ

ಸೇವಾ ಅವಧಿಯ ಅಧ್ಬುತ ನೆನಪು, ಅನುಭವಗಳು ಶ್ರೀಮಂತವಾಗಿವೆ: ಎಸ್ ಎ ಬೋಬ್ಡೆ - 1 min read

Photo Credit :

ಸೇವಾ ಅವಧಿಯ ಅಧ್ಬುತ ನೆನಪು, ಅನುಭವಗಳು ಶ್ರೀಮಂತವಾಗಿವೆ: ಎಸ್ ಎ ಬೋಬ್ಡೆ

ನವದೆಹಲಿ: ಸಿಜೆಐ ಶರದ್ ಅರವಿಂದ್ ಬೋಬ್ಡೆ ಏ.23 ರಂದು ನಿವೃತ್ತರಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ತಾವು ಅತ್ಯುತ್ತಮವಾದದನ್ನೇ ಮಾಡಿದ್ದೇನೆ ಎಂಬ ತೃಪ್ತಿ, ಸಂತೋಷ, ಸದ್ಭಾವನೆ ಹಾಗೂ ಎಂದಿಗೂ ಉಳಿಯುವ ನೆನಪುಗಳೊಂದಿಗೆ ಸಿಜೆಐ ಸ್ಥಾನದಿಂದ ಹೊರ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಐತಿಹಾಸಿಕ ಅಯೋಧ್ಯೆ ತೀರ್ಪು ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ನ್ಯಾಯದಾನ ಮಾಡಿದ್ದ ಎನ್.ಎ ಬೋಬ್ಡೆ ನವೆಂಬರ್ 2019 ರಲ್ಲಿ ಭಾರತದ 47 ನೇ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು.

ಕೋವಿಡ್-19 ನಂತಹ ಹಿಂದೆಂದೂ ಕಾಣದ ಸವಾಲಿನ ಪರಿಸ್ಥಿತಿಯಲ್ಲಿ ಸಿಜೆಐ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಎಸ್.ಎ ಬೋಬ್ಡೆ ಅವರ ಅವಧಿಯಲ್ಲಿ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯನಿರ್ವಹಿಸಿತ್ತು.

ಸೇವಾ ಅವಧಿಯ ಕೊನೆಯ ದಿನ ನನ್ನಲ್ಲಿ ವರ್ಣಿಸಲು ಸಾಧ್ಯಾವಾಗದಂತಹ ಭಾವನೆಗಳು ಮೂಡಿವೆ. ‘ಸಂತೋಷ, ಅದ್ಭುತ ವಾದಗಳು, ಅತ್ಯುತ್ತಮ ಪ್ರಸ್ತುತಿಗಳು, ಅದ್ಭುತ ನೆನಪುಗಳೊಂದಿಗೆ ಸುಪ್ರೀಂ ಕೋರ್ಟ್ ನಿಂದ ನಿರ್ಗಮಿಸುತ್ತಿದ್ದೇನೆ. ನ್ಯಾಯಾಧೀಶರಾಗಿ 21 ವರ್ಷಗಳ ಸೇವಾ ಅವಧಿಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಅನುಭವ ಶ್ರೀಮಂತವಾಗಿದೆ, ಸಹೋದ್ಯೋಗಿ ನ್ಯಾಯಾಧೀಶರೊಂದಿಗಿನ ನಿಕಟ ಸ್ನೇಹ ಅದ್ಭುತವಾಗಿತ್ತು” ಎಂದು ನೆನಪುಗಳನ್ನು ಎಸ್‌ಎ ಬೋಬ್ಡೆ ಮೆಲುಕು ಹಾಕಿದ್ದಾರೆ.

ಇದೇ ಸಂದರ್ಭ ವರ್ಚುವಲ್ ಹಿಯರಿಂಗ್ ಗಳ ವೇಳೆ ಉಂಟಾದ ಅತೃಪ್ತಿಕರ ವಿಷಯಗಳನ್ನೂ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

‘ಜವಾಬ್ದಾರಿಯನ್ನು ಎನ್ ಬಿ ರಮಣ ಅವರಿಗೆ ವರ್ಗಾಯಿಸುತ್ತಿದ್ದು, (48 ನೇ ಸಿಜೆಐ) ಅವರು ಕೋರ್ಟ್ ನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲಿದ್ದಾರೆ’ ಎಂದು ಬೋಬ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

See also  ಸಮುದ್ರದಡಿ ಮಿಸೈಲ್ ಪರೀಕ್ಷೆಗೆ ಸಜ್ಜಾಗಿರುವ ಭಾರತೀಯ ನೌಕಾ ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು