News Kannada
Friday, October 07 2022

ದೇಶ-ವಿದೇಶ

ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಭಾರತಕ್ಕೆ ಸಹಕಾರ: ಅಮೆರಿಕ ಭರವಸೆ - 1 min read

Photo Credit :

ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಭಾರತಕ್ಕೆ ಸಹಕಾರ: ಅಮೆರಿಕ ಭರವಸೆ

ವಾಷಿಂಗ್ಟನ್‌: ‘ಭಾರತದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರುತ್ತಿವೆ. ಪ್ರಸ್ತುತ ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಮೆರಿಕವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ’ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದರು.ಕೋವಿಡ್‌ ಲಸಿಕೆ ಮತ್ತು ಸೋಂಕಿಗೆ ಸಂಬಂಧಿಸಿದ ಔಷಧಿಗಳನ್ನು ಭಾರತಕ್ಕೆ ಕಳುಹಿಸುವಂತೆ ವಿವಿಧ ಭಾಗಗಳಿಂದ ಅಮೆರಿಕದ ಮೇಲೆ ಒತ್ತಡ ಬರುತ್ತಿರುವಂತೆಯೇ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಈ ಹೇಳಿಕೆ ನೀಡಿದ್ದಾರೆ.
‘ಈ ಬಿಕ್ಕಟ್ಟನ್ನು ನಿಭಾಯಿಸಲು ಅಮೆರಿಕವು ಭಾರತದ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ‘ಕ್ವಾಡ್‌’ ಪಾಲುದಾರರಿಗೆ ಲಸಿಕೆ ಸಂಬಂಧಿತ ಸಹಕಾರವನ್ನು ಒದಗಿಸುವುದು ನಮ್ಮ ದೊಡ್ಡ ಆದ್ಯತೆಯಾಗಿದೆ. ಭಾರತ ಕೂಡ ಕ್ವಾಡ್‌ ಸದಸ್ಯನಾಗಿದ್ದು, ಅದರೊಂದಿಗೆ ಲಸಿಕೆ ಅಭಿವೃದ್ದಿ ಮತ್ತು ಲಸಿಕೆ ವಿತರಣೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಕೋವ್ಯಾಕ್ಸ್‌ ಲಸಿಕೆಯನ್ನು ಕೂಡ ಒದಗಿಸಲಾಗುತ್ತದೆ’ ಎಂದು ಅವರು ಹೇಳಿದರು.‘ಸಾಂಕ್ರಾಮಿಕದ ಆರಂಭದಲ್ಲಿ ನಾವು ಭಾರತಕ್ಕೆ ತುರ್ತು ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಸಂಬಂಧಿಸಿದ ವಸ್ತುಗಳು, ಭಾರತೀಯ ರಾಜ್ಯ ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಸಾಂಕ್ರಾಮಿಕ ತರಬೇತಿ ಹಾಗೂ ವೆಂಟಿಲೇಟರ್‌ಗಳನ್ನು ಒದಗಿಸಿದ್ದೇವೆ. ಜತೆಗೆ 1.4 ಶತಕೋಟಿ ಡಾಲರ್ ಮೊತ್ತದ ಆರೋಗ್ಯ ನೆರವು ಕೂಡ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
‘ಭಾರತದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಈವರೆಗೆ ಯಾವುದೇ ದೇಶದಲ್ಲಿ ಈ ಪ್ರಮಾಣದಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಭಾರತ ಬಹಳ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೆಚ್ಚಿನ ಜನರಿಗೆ ಆದಷ್ಟು ಬೇಗ ಲಸಿಕೆಯನ್ನು ನೀಡಬೇಕು.ಭಾರತಕ್ಕೆ ಲಸಿಕೆಯ ಹೆಚ್ಚಿನ ಅವಶ್ಯಕತೆಯಿದೆ’ ಎಂದು ಅಧ್ಯಕ್ಷ ಜೋ ಬೈಡನ್‌ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಹೇಳಿದರು.

See also  ಕೆಂಪುಕೋಟೆ ಹಿಂಸಾಚಾರ: ಬಂಧಿತ ಪಂಜಾಬಿ ನಟನ ಸ್ನೇಹಿತರಿಗೆ ತೀವ್ರ ಶೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು