ಬ್ಯಾಂಕಾಕ್ :- ಥಾಯ್ಲೆಂಡ್ ಪ್ರಧಾನಿ ಪ್ರಯುಥ್ ಚಾನ್-ಒಚಾ ಮುಖಕ್ಕೆ ಮಾಸ್ಕ್ ಧರಿಸದ ಕಾರಣ ಅವರಿಗೆ 190 ಡಾಲರ್ ( 14,223ರೂ.) ದಂಡ ವಿಧಿಸಲಾಗಿದೆ.
ಸಭೆಯೊಂದರಲ್ಲಿ ಮಾಸ್ಕ್ ಧರಿಸದೆ ಒಚಾ ಅವರು ಭಾಗವಹಿಸಿದ್ದ ಚಿತ್ರವನ್ನು ಫೇಸ್ ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ಚಿತ್ರವನ್ನು ಆಧರಿಸಿ ದಂಡ ವಿಧಿಸಲಾಗಿದೆ. ಬಳಿಕ ಈ ಚಿತ್ರವನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ.
‘ಮಾಸ್ಕ್ ಧರಿಸದೆ ಇರುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ನಾನು ಪ್ರಧಾನಿ ಅವರಿಗೆ ತಿಳಿಸಿದೆ’ ಎಂದು ಬ್ಯಾಂಕಾಕ್ ರಾಜ್ಯಪಾಲ ಅಶ್ವಿನ್ ಕ್ವನ್ಮುಂಗ್ ತಿಳಿಸಿದ್ದಾರೆ.
ಮಾಸ್ಕ್ ಧರಿಸದ ಥಾಯ್ಲೆಂಡ್ ಪ್ರಧಾನಿಗೆ ದಂಡ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.