News Kannada
Sunday, October 02 2022

ದೇಶ-ವಿದೇಶ

ಭಾರತಕ್ಕೆ ಅಗತ್ಯ ನೆರವು ತಕ್ಷಣವೇ ರವಾನೆ: ಜೋ ಬೈಡನ್‌ - 1 min read

Photo Credit :

ಭಾರತಕ್ಕೆ ಅಗತ್ಯ ನೆರವು ತಕ್ಷಣವೇ ರವಾನೆ: ಜೋ ಬೈಡನ್‌

ವಾಷಿಂಗ್ಟನ್‌: ‘ಭಾರತಕ್ಕೆ ಕೋವಿಡ್‌ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ‌ನೆರವುಗಳನ್ನು ಅಮೆರಿಕ ಕಳುಹಿಸಲಿದೆ. ಕಳೆದ ವರ್ಷ ಅಮೆರಿಕ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾಗ ಭಾರತವೂ ನಮಗೆ ಸಹಾಯ ಮಾಡಿತ್ತು’ಎಂದು ಅಧ್ಯಕ್ಷ ಜೋ ಬೈಡನ್‌ ಅವರು ತಿಳಿಸಿದ್ದಾರೆ.ಈ ಸಂಬಂಧ ಬೈಡನ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಈಚೆಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬೈಡನ್‌ ಅವರು, ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಅಮೆರಿಕವೂ ಇದೆ’ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋ ಬೈಡನ್‌ ಅವರು,‘ರೆಮ್‌ಡಿಸಿವಿರ್‌ ಸೇರಿದಂತೆ ಎಲ್ಲಾ ರೀತಿಯ ಔಷಧಿ ಮತ್ತು ಇತರೆ ನೆರವನ್ನು ಅಮೆರಿಕ ತಕ್ಷಣವೇ ಭಾರತಕ್ಕೆ ಕಳುಹಿಸಲಿದೆ’ ಎಂದರು.‌‘ಲಸಿಕೆ ಉತ್ಪಾದನೆಗೆ ಬೇಕಾಗಿರುವ ಯಂತ್ರೋಪಕರಣವನ್ನು ನಿರ್ಮಿಸಲು ಸಂಬಂಧಪಟ್ಟ ಯಾಂತ್ರಿಕ ಭಾಗಗಳನ್ನು ಭಾರತಕ್ಕೆ ಕಳುಹಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

 

See also  ಐಷಾರಾಮಿ ಹೋಟೆಲ್ ಗೆ ಬೆಂಕಿ: ಐದು ಮಂದಿ ಸಜೀವ ದಹನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು