News Kannada
Thursday, September 29 2022

ದೇಶ-ವಿದೇಶ

ವಿಮಾನದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್‌ ತಂದ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್! - 1 min read

Photo Credit :

ವಿಮಾನದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್‌ ತಂದ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್!

ಕಲಬುರಗಿ: ಜಿಲ್ಲೆಯಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸಂಗ್ರಹ ಇಲ್ಲದಿರುವುದನ್ನು ಮನಗಂಡ ಸಂಸದ ಡಾ. ಉಮೇಶ್ ಜಾಧವ್, ಇಂದು(ಏ.28-ಬುಧವಾರ) ಬೆಂಗಳೂರಿನಿಂದ ವಿಮಾನದಲ್ಲಿ ಇಂಜೆಕ್ಷನ್ ಖುದ್ದಾಗಿ ತೆಗೆದುಕೊಂಡು ಬಂದು ಗಮನ ಸೆಳೆದಿದ್ದಾರೆ.ಬೆಂಗಳೂರಿನಲ್ಲಿರುವ ಡ್ರಗ್ ಕಂಟ್ರೋಲ್ ಮುಖ್ಯಾಲಯಕ್ಕೆ ಖುದ್ದಾಗಿ ಹೋಗಿ ತುರ್ತು ಅಗತ್ಯಕ್ಕಾಗಿ 350 ಬಾಟಲುಗಳನ್ನು ಮಂಜೂರು ಮಾಡಿಸಿಕೊಂಡ ಉಮೇಶ್ ಜಾಧವ್, ಇಂದು ಬೆಳಗ್ಗೆ ಕಲಬುರಗಿ ಡಿಎಚ್‌ಒಗೆ ಅವುಗಳನ್ನು ಒಪ್ಪಿಸಿದ್ದಾರೆ.
ಜಿಲ್ಲೆಯಲ್ಲಿ ಇಂಜೆಕ್ಷನ್ ಕೊರತೆ ಇದೆ ಎಂದು ಔಷಧ ಸಹಾಯಕ ನಿಯಂತ್ರಕರು ಕೈ ಚೆಲ್ಲಿದ್ದರು. ಅಲ್ಲದೇ ಕೂಡಲೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದರು. ಇದನ್ನು ಮನಗಂಡ ಸಂಸದ ಉಮೇಶ್ ಜಾಧವ್ ಸ್ವತಃ ಔಷಧಿಗಳನ್ನು ತಂದಿರುವುದು ವಿಶೇಷ.ನಾಲ್ಕು ದಿನಗಳ ಹಿಂದೆ ಕಲಬುರಗಿಗೆ ಮಂಜೂರಾಗಿದ್ದ ಇಂಜೆಕ್ಷನ್ ಎರಡು ದಿನಗಳ ಕಾಲ ವಿಳಂಬವಾಗಿ ಪೂರೈಕೆಯಾಗಿತ್ತು. ಇದರಿಂದ ಹಾಹಾಕಾರ ಉಂಟಾಗಿತ್ತು. ಮತ್ತೆ ವಿಳಂಬ ಆಗಬಾರದೆಂದು ಸಂಸದರೇ ಖುದ್ದಾಗಿ ತೆಗೆದುಕೊಂಡು ಬಂದಿದ್ದಾರೆ.ಇದರ ಜೊತೆಗೆ 460 ಹೆಚ್ಚುವರಿ ಬಾಟಲ್ ರೆಮ್‌ಡಿಸಿವಿರ್ ಔಷಧಿ ಇಂದು ಸಂಜೆ ವೇಳೆಗೆ ಕಲಬುರಗಿಗೆ ಬರಲಿವೆ ಎಂದು ಸಂಸದ ಡಾ. ಜಾಧವ್ ಭರವಸೆ ನೀಡಿದ್ದಾರೆ.
ಇನ್ನು ಸಂಸದರ ಈ ನಡೆಗೆ ಶ್ಲಾಘನೆ ವ್ಯಕ್ತವಾಗಿದ್ದು , ಆಪತ್ತಿನ ಕಾಲದಲ್ಲಿ ಜನತೆಯ ನೋವಿಗೆ ತುರ್ತಾಗಿ ಸ್ಪಂದಿಸಿದ ಡಾ. ಉಮೇಶ್ ಜಾಧವ್ ಅವರನ್ನು ಕೊಂಡಾಡಿದ್ದಾರೆ.

See also  ದೆಹಲಿಯಲ್ಲಿ ದಿನಕ್ಕೆ ಕನಿಷ್ಠ 5 ಮಹಿಳೆಯರ ಅತ್ಯಾಚಾರ: ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು