News Kannada
Sunday, September 25 2022

ದೇಶ-ವಿದೇಶ

ಕೋವಿಡ್‌ ಸಹಾಯವಾಣಿಗೆ ನಂಬರ್‌ ನೀಡಿದ ಮಹಿಳೆಯರಿಗೆ ಲೈಂಗಿಕ ಕಿರುಕುಳ - 1 min read

Photo Credit :

ಕೋವಿಡ್‌ ಸಹಾಯವಾಣಿಗೆ ನಂಬರ್‌ ನೀಡಿದ ಮಹಿಳೆಯರಿಗೆ ಲೈಂಗಿಕ ಕಿರುಕುಳ

ತಿರುವನಂತಪುರಂ : ಮಹಾಮಾರಿ ಕರೊನಾ ಕುರಿತಾದ ಸಹಾಯದ ನಿರೀಕ್ಷೆಗಾಗಿ ಫೋನ್​ ನಂಬರ್​ ಶೇರ್​​ ಮಾಡಿಕೊಂಡ ಅನೇಕ ಮಹಿಳೆಯರಿಗೆ ಅಶ್ಲೀಲ ಸಂದೇಶಗಳು, ಚಿತ್ರಗಳು ಮತ್ತು ಪೋರ್ನ್​ ವಿಡಿಯೋಗಳು ಬರುತ್ತಿದ್ದು, ಇಂತಹ ಕಹಿ ಅನುಭವವನ್ನು ಅನುಭವಿಸಿದ ಮಹಿಳೆಯರು ಟ್ವೀಟ್​ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.ಒಂದು ವಾರದ ಹಿಂದೆ ಶಾಸ್ವತಿ ಶಿವ ಎಂಬಾಕೆ ಕೆಲವು ದುಷ್ಕರ್ಮಿಗಳಿಂದ ತೀವ್ರ ಮಾನಸಿಕ ನೋವು ಅನುಭವಿಸಿದ್ದಾರೆ. ಕೋವಿಡ್​ ಸೋಂಕು ತಗುಲಿದ್ದ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಏನಾದರೂ ಅಗತ್ಯ ನೆರವು ಸಿಗಬಹುದೇನೋ ಎಂಬ ಭರವಸೆಯಿಂದ ತನ್ನ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದರು. ಬ್ಲಡ್​ ಬ್ಯಾಂಕ್​, ವೆಂಟಿಲೇಟರ್​ ಬೆಡ್​ ಮತ್ತು ಪ್ಲಾಸ್ಮಾ ದಾನಿ ಅಗತ್ಯವಿದೆಯೇ ಎಂಬ ಕರೆಗಳು ಸಹ ಬಂದವು.
ಆದರೆ, ಓರ್ವ ಕರೆ ಮಾಡಿ ನೀವಿನ್ನೂ ಒಂಟಿಯಾ? ನಿಮಗೆ ಮದುವೆ ಆಗಿಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಇದರ ನಡುವೆ ಒಂದೇ ಸಮಯದಲ್ಲಿ ಏಳು ಮಂದಿ ವಿಡಿಯೋ ಕಾಲ್​ ಮಾಡಿದ್ದು, ಇದರಿಂದ ಹೆದರಿದ ಶಾಸ್ವತಿ ತನ್ನ ಮೊಬೈಲ್​ ಫೋನ್​ ಅನ್ನು ಸೈಲೆಂಟ್​ನಲ್ಲಿ ಇಡುವಂತಾಯಿತು. ವೈದ್ಯಕೀಯ ಸೌಲಭ್ಯ ಅರಸಿ ನಂಬರ್​ ಶೇರ್​ ಮಾಡಿಕೊಂಡವಳಿಗೆ ಇದೀಗ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.ಶಾಸ್ವತಿ ಒಬ್ಬರೇ ಅಲ್ಲ ಅನೇಕ ಮಹಿಳೆಯರಿಗೆ ಈ ರೀತಿಯ ಅನುಭವವಾಗಿದೆ. ರಾಥಿ ಎಂಬಾಕೆ ಟ್ವೀಟ್​ ಮಾಡಿದ್ದು, ಸಹಾಯ ಕೇಳಿದ್ದಕ್ಕೆ ಏಪ್ರಿಲ್​ 26 ಅನೇಕ ಅಶ್ಲೀಲ ಚಿತ್ರಗಳು ರವಾನೆ ಆಗಿವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವಿಟರ್​ ಬಳಕೆದಾರ ತಮ್ಮ ಮೊಬೈಲ್​ಗೆ ಪೋರ್ನ್​ ವಿಡಿಯೋ ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನೊರ್ವ ಟ್ವಿಟರ್​ ಬಳಕೆದಾರ ತಮ್ಮ ನೋವಿನ ಮಾತನ್ನು ಅಕ್ಷರಕ್ಕಿಳಿಸಿದ್ದು, ಫೋನ್​ ಮಾಡಿದ ಓರ್ವ ಫೋನ್​ ಸೆಕ್ಸ್​ ಬಗ್ಗೆ ಕೇಳಿದನಂತೆ. ಶಾಸ್ವತಿ ತಮಗಾದ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಇನ್ನು ಮಹಿಳೆಯರಿಗೆ ಬಂದ ಫೋನ್​ ನಂಬರ್​ ಅನ್ನು ಮಾಧ್ಯಮ ಬೆನ್ನತ್ತಿ ಹೋದಾಗ ಅವುಗಳು ಸ್ವಿಚ್​ ಆಫ್​ ಆಗಿರುವುದು ಕಂಡುಬಂದಿದೆ. ಇದರ ಹಿಂದೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡವು ಇರಬಹುದು ಎಂದು ತಿಳಿದುಬಂದಿದೆ. ನೆರವಿಗಾಗಿ ಆಸ್ಪತ್ರೆ ಮೊರೆ ಹೋದವರ ನಂಬರ್​ ಶೇರ್​ ಮಾಡಿ ಈ ಕುಚೇಷ್ಟೇ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

See also  ಕಾಶ್ಮೀರದಲ್ಲಿ ದಾಳಿ ನಡೆಸಿದ ಉಗ್ರರಲೊಬ್ಬ 10ನೇ ತರಗತಿ ವಿದ್ಯಾರ್ಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು